ʻರಾಹಾʼ ಎಂದು ಮಗಳಿಗೆ ಮುದ್ದಾದ ಹೆಸರಿಟ್ಟ ರಣಬೀರ್, ಆಲಿಯಾ ದಂಪತಿ

ಬಾಲಿವುಡ್ (Bollywood) ನಟಿ ಆಲಿಯಾ ಭಟ್ (Alia bhat) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಕಪೂರ್ ಕುಟುಂಬ ಮಗಳ ಆಗಮನದ ಖುಷಿಯಲ್ಲಿದ್ದಾರೆ. ಇದೀಗ ಮುದ್ದು ಮಗಳಿಗೆ ಚೆಂದದ ಹೆಸರಿಟ್ಟು ನಾಮಕರಣ ಮಾಡಿದ್ದಾರೆ.

ಬಾಲಿವುಡ್ (Bollywood) ನಟಿ ಆಲಿಯಾ ಭಟ್ (Alia bhatt) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಕಪೂರ್ ಕುಟುಂಬ ಮಗಳ ಆಗಮನದ ಖುಷಿಯಲ್ಲಿದ್ದಾರೆ. ಇದೀಗ ಮುದ್ದು ಮಗಳಿಗೆ ಚೆಂದದ ಹೆಸರಿಟ್ಟು ನಾಮಕರಣ ಮಾಡಿದ್ದಾರೆ. ಮಗಳಿಗೆ ʻರಾಹಾʼ (RAHA) ಎಂದು ಹೆಸರಿಟ್ಟಿದ್ದಾರೆ. ನವೆಂಬರ್ 6 ರಂದು ಆಲಿಯಾ ಭಟ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಇನ್ನೂ ರಣಬೀರ್ ದಂಪತಿಯ ಮಗಳಿಗೆ ಇಡುವ ಹೆಸರೇನು ಅನ್ನೋದನ್ನ ತಿಳಿದುಕೊಳ್ಳುವ ಕುತೂಹಲವೂ ಅಭಿಮಾನಿಗಳಿಗೆ ಹೆಚ್ಚಾಗಿತ್ತು. ಈಗ ರಣಬೀರ್ ಹಾಗೂ ಆಲಿಯಾ ಮಗಳ ಹೆಸರು ಬಹಿರಂಗಪಡಿಸಲಾಗಿದೆ. ಚಂದದ ಹೆಸರನ್ನು ರಣಬೀರ್ ಹಾಗೂ ಆಲಿಯಾ ತಮ್ಮ ಮಗಳಿಗೆ ಇಟ್ಟಿದ್ದಾರೆ. ಮಗಳ ಹೆಸರನ್ನು ಅಲಿಯಾ ಭಟ್ ಇನ್ ಸ್ಟಾಗ್ರಾಂ ಮೂಲಕ ಬಹಿರಂಗ ಪಡಿಸಿದ್ದಾರೆ. ʻರಾಹಾʼ ಪದದ ಅರ್ಥವನ್ನು ಅಲಿಯಾ ಭಟ್ ವಿವರಿಸಿದ್ದಾರೆ. ರಾಹಾ ಹಲವು ಅರ್ಥಗಳನ್ನು ಹೊಂದಿದೆ. ರಾಹಾ ಎಂದರೆ ದೈವಿಕ ಮಾರ್ಗ ಎಂದರ್ಥ. ಸ್ವಾಹಿಲಿ ಭಾಷೆಯಲ್ಲಿ ಸಂತೋಷ. ಇನ್ನು ಸಂಸ್ಕೃತದಲ್ಲಿ ಕುಲ ಎಂದರ್ಥ. ಇದನ್ನೂ ಓದಿ : – ಪ್ರೀ ವೆಡ್ಡಿಂಗ್ ಸಂಭ್ರಮದಲ್ಲಿ ಹನ್ಸಿಕಾ ಮೋಟ್ವಾನಿ ಜೋಡಿ…!

ಬಂಗಾಳಿ ಭಾಷೆಯಲ್ಲಿ ವಿಶ್ರಾಂತಿ, ಸೌಕರ್ಯ, ಪರಿಹಾರ ಎಂದರ್ಥ, ಅರೆಬಿಕ್ ಭಾಷೆಯಲ್ಲಿ ರಾಹಾ ಎಂದರೆ ಶಾಂತಿ, ಸಂತೋಷ ಹಾಗೂ ಸ್ವಾತಂತ್ರ್ಯ ಎಂಬ ಅರ್ಥವಿದೆ. ನಾವು ರಾಹಾಳನ್ನು ಕೈಯಲ್ಲಿ ಹಿಡಿದ ದಿನದಿಂದ ನಾವು ಸಂತೋಷ, ಶಾಂತಿ ಅನುಭವಿಸುತ್ತಿದ್ದೇವೆ. ನಮ್ಮ ಕುಟುಂಬವನ್ನು ಸಂತೋಷವಾಗಿರಿಸಿದ ರಾಹಾಳಿಗೆ ಧನ್ಯವಾದ. ನಮ್ಮ ಜೀವನ ಈಗಷ್ಟೇ ಆರಂಭವಾದಂತಿದೆ ಎಂದು ಅಲಿಯಾ ಭಟ್ ತಿಳಿಸಿದ್ದಾರೆ.

ಇದನ್ನೂ ಓದಿ : – ಸಮಂತಾ ಸಿನಿಮಾಗೆ ಸಂಕಷ್ಟ – ಕೋರ್ಟ್ ನಿಂದ ತಡೆಯಾಜ್ಞೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!