ಸಚಿನ್ ತೆಂಡೂಲ್ಕರ್ (Sachin Tendulkar) ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ತಾನು ಆಡಿದ ಮೊದಲ ರಣಜಿ (Ranji debut) ಪಂದ್ಯದಲ್ಲೇ ಶತಕ ಸಿಡಿಸಿದ್ದಾರೆ.
ಗೋವಾ(Goa) ಪರ ಆಡುತ್ತಿರುವ ಅರ್ಜುನ್ ತೆಂಡೂಲ್ಕರ್ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ 120 ರನ್(207 ಎಸೆತ, 16 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾಗಿದ್ದಾರೆ. ಈ ಹಿಂದೆ ಸಚಿನ್ ತೆಂಡೂಲ್ಕರ್ ಮೊದಲ ರಣಜಿ ಪಂದ್ಯದಲ್ಲೇ ಶತಕ ಹೊಡೆದಿದ್ದರು. ಈಗ ತಂದೆಯಂತೆ ಅರ್ಜುನ್ ತೆಂಡೂಲ್ಕರ್ ಶತಕ ಬಾರಿಸಿದ್ದಾರೆ. ಇದನ್ನು ಓದಿ : – ಕೆಪಿಸಿಸಿ ಚುನಾವಣಾ ಸಮಿತಿ ರಚನೆ ಮಾಡಿದ ಹೈಕಮಾಂಡ್ …!
15 ವರ್ಷದಲ್ಲೇ ರಣಜಿ ಕ್ಯಾಪ್ ಧರಿಸಿದ್ದ ಸಚಿನ್ 1988ರಲ್ಲಿ ತಮ್ಮ ಮೊದಲ ರಣಜಿ ಪಂದ್ಯದಲ್ಲಿ ಗುಜರಾತ್ ವಿರುದ್ಧ ಅಜೇಯ 100 ರನ್ ಹೊಡೆದಿದ್ದರು. 23 ವರ್ಷದ ಅರ್ಜುನ್ ತೆಂಡೂಲ್ಕರ್ ಮಾಧ್ಯಮ ವೇಗಿ ಬೌಲರ್ ಆಗಿದ್ದಾರೆ. ಈ ಹಿಂದೆ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು. ಐಪಿಎಲ್ನಲ್ಲಿ ಮುಂಬೈ ತಂಡ ಖರೀದಿಸಿದ್ದರೂ ಅರ್ಜುನ್ ತೆಂಡೂಲ್ಕರ್ ಅಂತಿಮ 11ರ ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ.
ಇದನ್ನು ಓದಿ : – ವಿಶ್ವಕಪ್ ಫೈನಲ್ ನನ್ನ ಕೊನೆಯ ಪಂದ್ಯ..!ನಿವೃತ್ತಿಗೆ ಮುಂದಾದ ಲಿಯೋನೆಲ್ ಮೆಸ್ಸಿ