ನಟಿ ರಶ್ಮಿಕಾ ಮಂದಣ್ಣ( RASMIKA MADANNA ) ಗೆ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ಹೀಗಿರುವಾಗ ಸಮಂತಾ ಮಾಜಿ ಪತಿ ನಾಗಚೈತನ್ಯ ಜೊತೆ ರಶ್ಮಿಕಾ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ. `ಸೀತಾ ರಾಮಂ’ ಚಿತ್ರದ ಸೂಪರ್ ಸಕ್ಸಸ್ ನಂತರ ಇದೀಗ ರಶ್ಮಿಕಾ ಮಂದಣ್ಣಗೆ ಭರ್ಜರಿ ಆಫರ್ ಸಿಕ್ಕಿದೆ.
ಟಾಲಿವುಡ್ ( TOLLYWOOD ) ನಟ ನಾಗಚೈತನ್ಯಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ತೆರೆಯ ಮೇಲೆ ರೊಮ್ಯಾನ್ಸ್ ಮಾಡಲಿರುವ ಜೋಡಿ ನಾಗಚೈತನ್ಯ ಮತ್ತು ರಶ್ಮಿಕಾ ಸಿನಿಮಾ ನೋಡಲು ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ. ಸದ್ಯದಲ್ಲೇ ಚಿತ್ರದ ಕುರಿತು ಅಧಿಕೃತ ಮಾಹಿತಿ ಹೊರಬೀಳಲಿದೆ.
ಇದನ್ನು ಓದಿ : – ಬಿಡುಗಡೆಗೆ ಮುನ್ನವೇ ಅಮೆರಿಕದಲ್ಲಿ ಗಾಳಿಪಟ – 2 ಹೌಸ್ ಫುಲ್