ಬೆಲೆ ನಿಯಂತ್ರಣಕ್ಕೆ ಕಡಿವಾಣ ಹಾಕಲು RBI ವಿಫಲ- ಹಣದುಬ್ಬರ 7.41ಕ್ಕೆ ಏರಿಕೆ

ಬೆಲೆ ನಿಯಂತ್ರಣ (Price control) ದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತೊಮ್ಮೆ ವಿಫಲವಾಗಿದೆ. ಆಗಸ್ಟ್ (August) ಗೆ ಹೋಲಿಸಿದರೆ ಸೆಪ್ಟೆಂಬರ್ ನಲ್ಲಿ ಚಿಲ್ಲರೆ ಹಣದುಬ್ಬರ ಗಮನಾರ್ಹವಾಗಿ ಹೆಚ್ಚಾಗಿದೆ. ಕೇವಲ ಒಂದು ತಿಂಗಳಲ್ಲಿ ಹಣದುಬ್ಬರವು 7 ರಿಂದ 7.41 ಕ್ಕೆ ಜಿಗಿದಿದೆ. ಆಹಾರ ಸೂಚ್ಯಂಕ ಕೂಡ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಆಹಾರ ಬೆಲೆ ಸೂಚ್ಯಂಕವು 7.62 ರಿಂದ 8.6 ರಷ್ಟು ಹೆಚ್ಚಾಗಿದೆ.

ತರಕಾರಿಗಳ ಬೆಲೆಗಳು ಶೇಕಡಾ 2.6 ರಿಂದ 18.05 ರಷ್ಟು ಹೆಚ್ಚಾಗಿದೆ. ಮಾಂಸಾಹಾರ ದರವೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಾಂಸದ ಬೆಲೆ ಶೇ.1.3ರಿಂದ ಶೇ.2.55ರಷ್ಟು ಏರಿಕೆಯಾಗಿದೆ. ಅಲ್ಲದೆ ಬಟ್ಟೆಗಳ ಬೆಲೆಗಳು ಶೇಕಡಾ 0.8 ರಷ್ಟು ಹೆಚ್ಚಾಗಿದೆ. 0.4ರಷ್ಟು ಏರಿಕೆಯೊಂದಿಗೆ ಇಂಧನ ಬೆಲೆ ಶೇ.10.39ಕ್ಕೆ ಜಿಗಿದಿದೆ ಎಂದು ಕೇಂದ್ರ ಸರ್ಕಾರವೇ ಪ್ರಕಟಿಸಿದೆ. ವಸತಿ ಕ್ಷೇತ್ರ ಕೂಡ ಅದೇ ಹಾದಿಯಲ್ಲಿದೆ. ವಸತಿ ಸೂಚ್ಯಂಕವು 0.3 ಶೇಕಡಾ ಹೆಚ್ಚಳದೊಂದಿಗೆ 4.57 ಶೇಕಡಾವನ್ನು ತಲುಪಿತು. ಒಟ್ಟಿನಲ್ಲಿ ಗ್ರಾಹಕರ ಬೆಲೆ ಸೂಚ್ಯಂಕ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ.

ಇದನ್ನೂ ಓದಿ :-  ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡು ಹುಚ್ಚರಾಗಿದ್ದಾರೆ – ನಳಿನ್ ಕುಮಾರ್ ಕಟೀಲ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!