ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಾಲ ನೀಡುವ ದರವನ್ನು ಅಂದರೆ ರೆಪೊ ದರವನ್ನು ಶೇಕಡಾ 4.90 ಕ್ಕೆ ಏರಿಸಿದೆ. ಆರ್‌ಬಿಐ ‘withdrawal of accommodation’ ನೀತಿಯ ನಿಲುವನ್ನು ಉಳಿಸಿಕೊಳ್ಳಲು ಸರ್ವಾನುಮತದಿಂದ ನಿರ್ಧರಿಸಿದೆ.
ಕಳೆದ ಎರಡು ತಿಂಗಳಲ್ಲಿ ರೆಪೊ ದರ ಹೆಚ್ಚಳವಾಗುತ್ತಿರುವುದು ಇದು ಎರಡನೇ ಸಲವಾಗಿದೆ. ರೆಪೊ ದರ ಹೆಚ್ಚಳದಿಂದ ಗೃಹ ಸಾಲ, ವೈಯಕ್ತಿಕ ಸಾಲದ ಬಡ್ಡಿದರ ಹೆಚ್ಚಳವಾಗಲಿದೆ. ಹಣದುಬ್ಬರದ ಒತ್ತಡ ಹಿನ್ನೆಲೆಯಲ್ಲಿ ದರಗಳನ್ನು ಹೆಚ್ಚಿಸಲು ವಿತ್ತೀಯ ನೀತಿ ಸಮಿತಿ ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಉಕ್ರೇನ್ ಮತ್ತು ರಷ್ಯಾ ಯುದ್ಧವು ಹಣದುಬ್ಬರದ ಜಾಗತೀಕರಣಕ್ಕೆ ಕಾರಣವಾಗಿದೆ. ಇದನ್ನೂ ಓದಿ :- ನೋಟುಗಳ ಮೇಲೆ ಮಹಾತ್ಮಾ ಗಾಂಧಿ ಚಿತ್ರ ಮುಂದುವರೆಯಲಿದೆ – ಆರ್ ಬಿಐ ಸ್ಪಷ್ಟನೆ
ರೆಪೋ ದರ ಎಂದರೇನು ?
ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರ ರೆಪೊ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ. ಹಣದುಬ್ಬರದ ಸಂದರ್ಭದಲ್ಲಿ, ಆರ್ ಬಿಐ ರೆಪೊ ದರ ಹೆಚ್ಚಿಸುತ್ತವೆ, ಸಾಧ್ಯವಾದಷ್ಟು ಬ್ಯಾಂಕುಗಳು ಆರ್ ಬಿಐಯಿಂದ ಸಾಲ ಪಡೆಯುವುದನ್ನು ತಡೆಯುತ್ತದೆ. ಇದು ಅಂತಿಮವಾಗಿ ಆರ್ಥಿಕತೆಯಲ್ಲಿ ಹಣ ಪೂರೈಕೆ ಕಡಿಮೆ ಮಾಡಿ ಹಣದುಬ್ಬರ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : – ₹2000 ನೋಟುಗಳ ಸಂಖ್ಯೆ ಭಾರೀ ಇಳಿಕೆ! ಕುತೂಹಲ ಕೆರಳಿಸಿದ ಮೋದಿ ನಡೆ..!