ದೀಪಾವಳಿ ನಂತರ LPG ಸಿಲಿಂಡರ್ಗಳ ಬೆಲೆಗಳನ್ನು ತೀವ್ರವಾಗಿ ಕಡಿತಗೊಳಿಸಲಾಗಿದೆ. ಮಿತಿಮೀರಿದ ಇಂಧನ ಬೆಲೆಗಳಿಂದ ಬಳಲುತ್ತಿರುವ ಗ್ರಾಹಕರು ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಇಂದು ಅಂದರೆ ನವೆಂಬರ್ 1 ರಂದು ಮತ್ತೆ ಕಡಿತಗೊಳಿಸಲಾಗಿದೆ.
19-ಕೆಜಿ ವಾಣಿಜ್ಯ LPG ಸಿಲಿಂಡರ್ ಬೆಲೆಯಲ್ಲಿ 115.50 ರೂಪಾಯಿ ಕಡಿಯಗೊಳಿಸಲಾಗಿದ್ದು, ಗೃಹಬಳಕೆಯ ಸಿಲಿಂಡರ್ ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.ಸರ್ಕಾರಿ ಸ್ವಾಮ್ಯದ ಇಂಧನ ವ್ಯಾಪಾರಿಗಳ ಬೆಲೆ ಹೇಳಿಕೆಯ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ 19 ಕೆಜಿ ವಾಣಿಜ್ಯ LPG ಸಿಲಿಂಡರ್ ನ ಬೆಲೆ ಪ್ರತಿ ಸಿಲಿಂಡರ್ಗೆ ರೂ 1,885 ರಿಂದ ರೂ 1,744 ಕ್ಕೆ ಇಳಿದಿದೆ. ಏತನ್ಮಧ್ಯೆ, ದೇಶೀಯ ಎಲ್ಪಿಜಿ ಬೆಲೆಗಳು 14.2 ಕೆಜಿ ಸಿಲಿಂಡರ್ ಗೆ 1,053 ರೂ. ಆಗಿದೆ. ಇದನ್ನೂ ಓದಿ : – BREAKING NEWS – ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ ಕನ್ಯತ್ವ ಪರೀಕ್ಷಿಸುವ Two Finger Test ನಿಷೇಧಿಸಿದ ಸುಪ್ರೀಂ
ನವೆಂಬರ್ 1, ಮಂಗಳವಾರದಂದು ಇಂಡಿಯನ್ ಆಯಿಲ್ ಹೊಸ LPG ದರಗಳನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಇಂಡೇನ್ ನ 19 ಕೆ.ಜಿ ವಾಣಿಜ್ಯ ಸಿಲಿಂಡರ್ ಬೆಲೆ ಇಂದಿನಿಂದ ದೆಹಲಿಯಲ್ಲಿ 115.5 ರೂ., ಕೋಲ್ಕತ್ತಾದಲ್ಲಿ 113 ರೂ., ಮುಂಬೈನಲ್ಲಿ 115.5 ರೂ. ಮತ್ತು ಚೆನ್ನೈನಲ್ಲಿ 116.5 ರೂ. ಕಡಿತಗೊಳಿಸಲಾಗಿದೆ.
ಇದನ್ನೂ ಓದಿ : – ಮೊರ್ಬಿ ಸೇತುವೆ ಕುಸಿತ ಪ್ರಕರಣ – ಬಿಜೆಪಿ ಸಂಸದರ ಕುಟುಂಬದ 12 ಮಂದಿ ಸಾವು