ಇಂದಿನಿಂದ 19 ಕೆಜಿಯ ಕಮರ್ಷಿಯಲ್ ಸಿಲಿಂಡರ್ (Cylinder) ಬೆಲೆ 135 ರೂ. ಇಳಿಕೆಯಾಗಿದೆ. 19 ಕೆಜಿಯ ಕಮರ್ಷಿಯಲ್ ಸಿಲಿಂಡರ್ನ ಬೆಲೆ ದೆಹಲಿಯಲ್ಲಿ 2,354 ರೂ.ಗೆ ಇತ್ತು, ಆದರೆ ಈಗ 2,219 ರೂ.ಗೆ ಇಳಿಕೆಯಾಗಿದೆ.
ಕೋಲ್ಕತ್ತಾದಲ್ಲಿ (Kolkata) 2,454 ರೂ. ಇದ್ದರೆ ಈಗ 2,322 ರೂ.ಗೆ ಇಳಿದಿದೆ. ಮುಂಬೈನಲ್ಲಿ (Mumbai) 2,306 ರೂ., ಚೆನ್ನೈನಲ್ಲಿ (Chennai) 2,507 ರೂ. ಇತ್ತು. ಈಗ ಇಲ್ಲಿ ಅನುಕ್ರವಮವಾಗಿ 2,171.50 ರೂ., 2,373 ರೂ.ಗೆ ಇಳಿಕೆಯಾಗಿದೆ. ಇಂದಿನಿಂದಲೇ ಈ ಪರಿಷ್ಕೃತ ಬೆಲೆ ಜಾರಿಯಾಗಲಿದೆ ಎಂದು ತೈಲ ಮಾರ್ಕೆಟಿಂಗ್ ಕಂಪನಿಗಳು ತಿಳಿಸಿದೆ. ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಇದನ್ನೂ ಓದಿ : – ಕೋಲಾರದಲ್ಲಿ ಯುವತಿಯ ಅಶ್ಲೀಲ ವಿಡಿಯೋ ತೋರಿಸಿ ಬೆದರಿಸುತ್ತಿದ್ದ ಗ್ಯಾಂಗ್ ಪೊಲೀಸರ ವಶಕ್ಕೆ