ಮೇ.18ಕ್ಕೆ ನಾನು ನನ್ನ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೇ11ಕ್ಕೆ ರಾಜೀನಾಮೆ ಕೊಡಬೇಕಿತ್ತು.
ಆದ್ರೆ ಚುನಾವಣಾ ನೋಟಿಫಿಕೇಶ್ ಬರದಿದ್ದ ಕಾರಣ ನೀಡಿರಲಿಲ್ಲ. ಈಗ ನೋಟಿಫಿಕೇಶನ್ ಕೂಡ ಬಂದಿದೆ. ಮೇ18ಕ್ಕೆ ರಾಜೀನಾಮೆ ನೀಡುತ್ತೇನೆ. ಇನ್ನು ಮೋಹನ ಲಿಂಬಿಕಾಯಿ ಅವರೂ ತಾವೇ ಪರಿಷತ್ ಅಭ್ಯರ್ಥಿಯಾಗುತ್ತೇನೆ ಎಂದು ಹೇಳುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಹೊರಟ್ಟಿ, ಆ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಬಿಜೆಪಿ ಟಿಕೆಟ್ ವಿಚಾರವಾಗಿ ಮೇ.18 ರ ನಂತರವೇ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೊರಟ್ಟಿ ಹೇಳಿದ್ದಾರೆ. ಇದನ್ನೂ ಓದಿ : – ರೈಲುಗಳಲ್ಲಿ ಮಕ್ಕಳಿಗಾಗಿ ‘ಬೇಬಿ ಬರ್ತ್’ – ಪ್ರಯಾಣಿಕರು ಫುಲ್ ಖುಷ್