ಗಾಂಧಿ ಕುಟುಂಬದ ಇನ್ನೊಬ್ಬ ಸದಸ್ಯ ರಾಜಕೀಯ ಪ್ರವೇಶ ಮಾಡುವ ಮುನ್ಸೂಚನೆ ಸಿಕ್ಕಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಳಿಯ ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕ ವಾದ್ರಾ ಪತ್ನಿ ರಾಬರ್ಟ್ ವಾದ್ರಾ ರಾಜಕೀಯ ಪ್ರವೇಶ ಮಾಡುವ ಸುಳಿವು ನೀಡಿದ್ದಾರೆ.
‘ಜನ ಬಯಸಿದರೆ ರಾಜಕೀಯ ಪ್ರವೇಶ ಮಾಡಲು ಸಿದ್ಧ’ ಎಂದು ರಾಬರ್ಟ್ ವಾದ್ರಾ ಹೇಳಿದ್ದಾರೆ. ಯೂಟ್ಯೂಬ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಒಂದು ವೇಳೆ ಅವರನ್ನು ಪ್ರತಿನಿಧಿಸಬೇಕು ಎಂದು ಜನ ಬಯಸಿದ್ದೇ ಆದಲ್ಲಿ, ನಾನು ಕೆಲವು ಬದಲಾವಣೆ ಮಾಡಲು ಸಾಧ್ಯವಾದರೆ, ಖಂಡಿತಾ ಒಂದು ಕೈ ನೋಡುತ್ತೇನೆ’ ಎಂದು ಹೇಳಿದ್ದಾರೆ. ಇದನ್ನು ಓದಿ :- ಪಾಕ್ ನೂತನ ಪ್ರಧಾನಿಯಾಗಿ ಇಂದು ಶಹಬಾಜ್ ಅಧಿಕಾರ ಸ್ವೀಕಾರ – ಬಿಲಾವಲ್ ಭುಟ್ಟೋ ವಿದೇಶಾಂಗ ಸಚಿವ..?
ರಾಜಕೀಯಕ್ಕೆ ಪ್ರವೇಶ ಮಾಡುವುದರಿಂದ ಹೆಚ್ಚಿನ ಜನ ಸೇವೆ ಮಾಡಲು ಸಾಧ್ಯ ಎಂದು ಹೇಳಿದ್ದಾರೆ. ಆ ಮೂಲಕ ರಾಜಕೀಯ ಪ್ರವೇಶ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ‘ನನ್ನ ಸಾಮಾಜಿಕ ಚಟುವಟಿಕೆಗಳು 10 ವರ್ಷಗಳಿಂತ ಹೆಚ್ಚಿನ ಸಮಯದಿಂದ ನಡೆದುಕೊಂಡು ಬರುತ್ತಿದೆ. ಭವಿಷ್ಯದಲ್ಲಿ ಇದು ಮುಂದುವರಿಯಬೇಕು ಎನ್ನುವುದು ನನ್ನ ಆಸೆ. ನಾನು ರಾಜಕೀಯಕ್ಕೆ ಪ್ರವೇಶ ಮಾಡುತ್ತೇನೆ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಸಾಮಾಜಿಕ ಸೇವೆಗಳು ಮುಂದುವರಿಯಲಿದೆ’ ಎಂದು ವಾದ್ರಾ ಹೇಳಿದ್ದಾರೆ.
ಇದನ್ನು ಓದಿ :- ನಾನು ಇನ್ನು 24 ಗಂಟೆ ಟೈಂ ಕೊಡ್ತೀನಿ ಅಷ್ಟೇ – ಮೋದಿಗೆ ತೆಲಂಗಾಣ ಸಿಎಂ ಕೆಸಿಆರ್ ಸವಾಲು