ಶ್ರೀ ಲಂಕಾ ವಿರುದ್ಧದ ಟಿ-20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮ ಹಲವು ದಾಖಲೆಗಳನ್ನು ಬರೆದಿದ್ದಾರೆ.
ಲಕ್ನೋದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮ 37 ರನ್ ಗಡಿ ದಾಟುತ್ತಿದ್ದಂತೆ ಟಿ-20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಕೆಯ ಸರದಾರ ಎಂಬ ದಾಖಲೆಗೆ ಬರೆದರು.
ಟಿ-20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿ ಮೊದಲೆರಡು ಸ್ಥಾನಗಳಲ್ಲಿದ್ದ ಭಾರತದ ವಿರಾಟ್ ಕೊಹ್ಲಿ 3926 ಮತ್ತು ಮಾರ್ಟಿನ್ ಗುಪ್ಟಿಲ್ 3929 ದಾಖಲೆಯನ್ನು ಮುರಿದರು.