ಬೆಂಗಳೂರು: ಮುಖದ ಅಂದ ಹೆಚ್ಚಿಸಲು ಉಪಯೋಗಕ್ಕೆ ಬರುವ ಯಾವ ಅಪಾಯವೂ ಇಲ್ಲದಂತಹ ಒಂದು ಸುರಕ್ಷಿತ ದ್ರವ . ರೋಸ್ ವಾಟರ್ ನ ಉಪಯೋಗಗಳು ರೋಸ್ ವಾಟರ್ ಅನ್ನು ಕೇವಲ ಬ್ಯೂಟಿ ಹೆಚ್ಚಿಸಲು ಮಾತ್ರ ಬಳಸಲಾಗುತ್ತದೆ ಅಂದುಕೊಳ್ಳಬೇಡಿ . ಅದರಿಂದ ಇನ್ನೂ ಹಲವಾರು ಪ್ರಯೋಜನಗಳಿವೆ .
ದೇಹದ ಚರ್ಮದ ಕಾಂತಿ ಹೆಚ್ಚಿಸುವುದರಿಂದ ಹಿಡಿದು ಚರ್ಮದ ಮೇಲಿನ ಮಚ್ಚೆ ತೆಗೆಯುವವರೆಗೂ ಇದರ ಉಪಯೋಗ ಬಹಳ . ಸೆನ್ಸಿಟಿವ್ ಸ್ಕಿನ್ ಹೊಂದಿರುವವರಿಗೆ ಇದರ ಪ್ರಯೋಜನ ಬಹಳ ಲಾಭಕಾರಿ . ಏಕೆಂದರೆ ಇದು ನೈಸರ್ಗಿಕ ವಿಧಾನದಿಂದ ತಯಾರಾದ ದ್ರವ.
ಸ್ನಾನ ಮಾಡುವಾಗ ಕೆಲವೊಂದು ಹನಿಗಳಷ್ಟು ರೋಸ್ ವಾಟರ್ ಅನ್ನು ನೀವು ಸ್ನಾನ ಮಾಡುವ ನೀರಿಗೆ ಹಾಕಿ ಬಿಸಿ ಮಾಡಿ . ಅದರ ಘಮಗುಡುವ ಪರಿಮಳ ನಿಮ್ಮನ್ನು ನಿಜಕ್ಕೂ ರಿಲಾಕ್ಸ್ ಮಾಡುತ್ತದೆ . ಮನಸ್ಸಿನ ತಳಮಳವೆಲ್ಲಾ ದೂರವಾಗಿ , ಹೊಸ ಉಲ್ಲಾಸ ನಿಮ್ಮ ಮನಸ್ಸಿನಲ್ಲಿ ಮನೆ ಮಾಡುತ್ತದೆ . ಅಷ್ಟೇ ಅಲ್ಲದೆ ರೋಸ್ ವಾಟರ್ ಹಾಕಿ ಸ್ನಾನ ಮಾಡುವುದರಿಂದ ನಿಮ್ಮ ದೇಹದ ಚರ್ಮಕ್ಕೆ ಕೂಡ ಬಹಳ ಉಪಯೋಗ ಇದೆ .
ಮೊಡವೆ ಸಮಸ್ಯೆ ಇರುವವರು 1 ಚಮಚ ರೋಸ್ ವಾಟರ್‌ಗೆ ನಿಂಬೆರಸ ಮಿಕ್ಸ್ ಮಾಡಿ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು. ಈ ರೀತಿ ಮಾಡುವುದರಿಂದ ಮೊಡವೆ ಕಡಿಮೆಯಾಗುವುದು. ಕಲೆಯೂ ಉಳಿಯುವುದಿಲ್ಲ.
ತುಟಿಗೆ ರೋಸ್ ವಾಟರ್ ಹಚ್ಚಿದರೆ ತುಟಿ ಮೃದುವಾಗುವುದು ಹಾಗೂ ನೋಡಲು ಆಕರ್ಷಕವಾಗಿ ಕಾಣುವುದು.