ನಟ ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ ರಾಜಮಾರ್ತಾಂಡ ಬಿಡುಗಡೆಗೆ ಸಿದ್ಧವಾಗಿದೆ. ಇದು ಚಿರು ಅವರ ಕೊನೆಯ ಸಿನಿಮಾವಾಗಿದೆ.
ಸಿನಿಮಾ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ . ರಿಲೀಸ್ ಹಿನ್ನೆಲೆಯಲ್ಲಿ ಚಿತ್ರತಂಡವು ವಿಶೇಷ ಪೂಜೆಯನ್ನೂ ಸಲ್ಲಿಸಿದೆ. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ರಾಮ್ ನಾರಾಯಣ್, ವಿಶೇಷ ಸುದ್ದಿಯೊಂದನ್ನು ನೀಡಿದ್ದಾರೆ.
ಚಿರು ಅವರ ಕೊನೆಯ ಸಿನಿಮಾದಲ್ಲಿ ಚಿರು ಪುತ್ರ ರಾಯನ್ ರಾಜ್ ಕೂಡ ಕಾಣಿಸಿಲಿದ್ದಾರಂತೆ. ಸಿನಿಮಾ ರೆಡಿಯಾಗಿ ಒಂದು ವರ್ಷವೇ ಆಗಿದೆ. ಇದನ್ನು ಓದಿ :- ಒಟಿಟಿಯಲ್ಲಿ ‘ಜೇಮ್ಸ್’ ಪ್ರಸಾರ – ಏಪ್ರಿಲ್ 14ಕ್ಕಾಗಿ ಕಾದು ಕುಳಿತಿರುವ ಪುನೀತ್ ಅಭಿಮಾನಿಗಳು
ರಾಯನ್ ರಾಜ್ ಹುಟ್ಟುವ ಮೊದಲೇ ಈ ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದವು. ಹಾಗಾಗಿ ರಾಯನ್ ಯಾವ ರೀತಿಯಲ್ಲಿ ಎಂಟ್ರಿ ಕೊಡಲಿದ್ದಾರೆ ಎನ್ನುವುದು ಕುತೂಹಲದ ವಿಷಯವಾಗಿದೆ.
ಇದನ್ನು ಓದಿ :- ಕ್ರಾಂತಿಯಲ್ಲಿ ನುಡಿ ಕಲಿಸಿದ ಕನ್ನಡ ತಾಯಿಗೆ ಚಿರಋಣಿ ಅಂದ ದಚ್ಚು