ನಿರ್ದೇಶಕ ರಾಜಮೌಳಿ ಹೆಸರಿಗೆ ಮತ್ತೊಂದು ಹಿಟ್ ಸಿನಿಮಾ ಸೇರ್ಪಡೆಯಾಗಿದೆ.ಅದುವೇ ಆರ್ ಆರ್ ಆರ್ ( RRR) ಸಿನಿಮಾ. ರಾಜಮೌಳಿ ಜತೆ ಕೆಲಸ ಮಾಡಲು ತಾರೆಯರು ತುದಿಗಾಲಲ್ಲಿ ನಿಲ್ಲುತ್ತಾರೆ.
ಆದರೆ ‘ಆರ್ ಆರ್ ಆರ್ ‘ ನಾಯಕಿ ಅಲಿಯಾ ಭಟ್ಗೆ ರಾಜಮೌಳಿ (Rajamouli) ಮೇಲೆ ಅಸಮಾಧಾನ ಉಂಟಾಗಿದೆ ಎನ್ನಲಾಗಿದೆ. ಅಜಯ್ ದೇವಗನ್ ಹಾಗೂ ಆಲಿಯಾ RRR ಚಿತ್ರವನ್ನು ಹಿಂದಿ ಭಾಷಿಕರಿಗೆ ಹತ್ತಿರವಾಗಿಸಿದ್ದರು. ಆದರೆ ‘ಆರ್ ಆರ್ ಆರ್ ‘ ಚಿತ್ರದಲ್ಲಿ ಆಲಿಯಾಗೆ ಹೇಳಿಕೊಳ್ಳುವಂತಹ ಪಾತ್ರ ಸಿಕ್ಕಿಲ್ಲ.
ದೀರ್ಘ ಅವಧಿಯ ಚಿತ್ರದಲ್ಲಿ ಆಲಿಯಾಗೆ ಇದ್ದ ಸ್ಕ್ರೀನ್ ಸ್ಪೇಸ್ ಕೆಲವೇ ನಿಮಿಷ. ಚಿತ್ರವನ್ನು ನೋಡಿದ ಆಲಿಯಾ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಆಲಿಯಾ ತಮ್ಮ ಇನ್ಸ್ಟಾಗ್ರಾಂನಿಂದ ‘ಆರ್ಆರ್ಆರ್’ ಕುರಿತ ಕೆಲವು ಪೋಸ್ಟ್ಗಳನ್ನೂ ಡಿಲೀಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆಲಿಯಾ ಇನ್ಸ್ಟಾಗ್ರಾಂನಲ್ಲಿ ಜ್ಯೂ.ಎನ್ಟಿಆರ್ ( Jr NTR) ಹಾಗೂ ರಾಮ್ ಚರಣ್ (Ramcharanteja )ರನ್ನು ಫಾಲೋ ಮಾಡುತ್ತಿದ್ದಾರೆ. ಆದ್ರೆ ನಿರ್ದೇಶಕ ರಾಜಮೌಳಿಯನ್ನು ಅನ್ಫಾಲೋ ಮಾಡಿದ್ದಾರೆ ಎನ್ನಲಾಗಿದೆ. ಆರ್ ಆರ್ ಆರ್ ಚಿತ್ರದ ಆರಂಭದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಆಲಿಯಾ, ಚಿತ್ರ ಬಿಡುಗಡೆಯಾದ ನಂತರ ಅಷ್ಟೇನೂ ಆಸಕ್ತಿ ವಹಿಸಿಲ್ಲ. ಚಿತ್ರದಲ್ಲಿ ತಮ್ಮ ಪಾತ್ರ ನಿರ್ವಹಣೆಯ ಬಗ್ಗೆ ಆಲಿಯಾ ಈ ರೀತಿಯಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ :- RRR MOVIE –ವಿಶ್ವಾದ್ಯಂತ ಧೂಳೆಬ್ಬಿಸಿಸುತ್ತಿದೆ ಆರ್ ಆರ್ ಆರ್ ಸಿನಿಮಾ – ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಅಬ್ಬರ