RS ELECTION – ಪಕ್ಕದ ಮನೆಯವರ ಧರ್ಮ ಪತ್ನಿಗೆ ಪತ್ರ ಬರೆಯುತ್ತೀರಾ – ಸಿದ್ದರಾಮಯ್ಯಗೆ ಸಿ. ಎಂ ಇಬ್ರಾಹಿಂ ಪ್ರಶ್ನೆ

ತಾಳಿ ಕಟ್ಟಿರೋರಿಗೆ ಬೇರೆಯವರು ಲವ್ ಲೆಟರ್ (LOVE LETTER) ಬರೆದರೆ ಆಗುತ್ತಾ‌?, ಪಕ್ಕದ ಮನೆಯವರ ಧರ್ಮ ಪತ್ನಿಗೆ ಪತ್ರ ಬರೆಯುತ್ತೀರಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (CM IBRAHIM) ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.


ವಿಧಾನಸೌಧದಲ್ಲಿ ಮಾತನಾಡಿದ ಅವರು, ತಮ್ಮ ಪಕ್ಷದ ಶಾಸಕರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ (SIDDARAMIAH) ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಿದ್ದರಾಮಯ್ಯ ಪತ್ರ ಬರೆದಿರುವುದು ಅಪರಾಧ ಅಲ್ವಾ?, ಇದು ನೈತಿಕತೆಯಾ? ಎಂದು ಪ್ರಶ್ನಿಸಿದರು. ಇದನ್ನೂ ಓದಿ : – RS ELECTION – ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ತಾರೆ – ಸಚಿವ ಆರ್. ಅಶೋಕ್, ಜಗದೀಶ್ ಶೆಟ್ಟರ್ ವಿಶ್ವಾಸ

ಕರ್ನಾಟಕದಲ್ಲಿ ಹೊಸ ಇತಿಹಾಸ ಶುರುವಾಗುತ್ತದೆ. ಬಿಜೆಪಿಯನ್ನು ಸೋಲಿಸಲೇ ಬೇಕು ಅಂತಾ ಇದ್ದರೆ ಮೊದಲ ಮತ ನಿಮಗೆ ಹಾಕೊಂಡು, 2ನೇ ಮತ ನಮಗೆ ಕೊಡಿ. ಆದರೆ, ಅದನ್ನು ಕೊಡಲು ತಯಾರಿಲ್ಲ. 2ನೇ ಮತ ಕೊಡಲು ನಾವು ತಯಾರಿದ್ದೇವೆ, ಅವರು ಸಿದ್ಧರಿಲ್ಲ. ಆತ್ಮಸಾಕ್ಷಿಯ ಮತವನ್ನು ಕಾಂಗ್ರೆಸ್ ಲೆಹರ್ ಸಿಂಗ್ ಗೆ ಕೊಡ್ತಾರಾ ಎಂದು ಕಿಡಿ ಕಾರಿದರು. ಲೆಹರ್ ಸಿಂಗ್ ಕನ್ನಡದವರಾ? ಎಂದು ಇಬ್ರಾಹಿಂ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : – ಡಿಕೆಶಿಗೆ ಮತ ತೋರಿಸಿದ ರೇವಣ್ಣ – ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!