ರಾಜ್ಯಸಭೆ ಚುನಾವಣೆ ರಂಗೇರಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ನಮ್ಮ ಎಲ್ಲಾ ಶಾಸಕರು ಮತದಾನ ಮಾಡ್ತಿದ್ದೇವೆ. ನಮ್ಮ ಮೂರು ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ ಎಂದರು. ನಿರ್ಮಲಾ ಸೀತಾರಾಮನ್, ಜಗ್ಗೇಶ್, ಲೆಹರ್ ಸಿಂಗ್ ಗೆಲ್ಲುತ್ತಾರೆ. ನಮ್ಮಲ್ಲಿ ಕ್ರಾಸ್ ವೋಟಿಂಗ್ ನಡೆಯುವುದಿಲ್ಲ ಎಂದು ಶೆಟ್ಟರ್ ತಿಳಿಸಿದ್ರು.
ಕಾಂಗ್ರೆಸ್ ನವರಿಗೆ ಮತಗಳೇ ಇಲ್ಲ – ಆರ್. ಅಶೋಕ್
ನಾನು ಚುನಾವಣಾ ಚಾಣಕ್ಯಅಲ್ಲ. ಕಾಂಗ್ರೆಸ್ ನವರಿಗೆ ಮತಗಳೇ ಇಲ್ಲ ಎಂದು ಆರ್.ಅಶೋಕ್ ಹೇಳಿದ್ದಾರೆ. ಜೆಡಿಎಸ್ ನವರಿಗೂ ಮತಗಳಿಲ್ಲ. ನಮಗೆ ಸೆಕೆಂಡ್ ಪ್ರಿಪರೆನ್ಸ್ ವೋಟಿದೆ. ಹಾಗಾಗಿ ನಾವೇ ಗೆಲ್ಲೋದು. ಆತ್ಮ ಸಾಕ್ಷಿ ಈಗಾಗಲೇ ಡಿವೈಡ್ ಆಗಿದೆ. ವೋಟ್ ಹಾಕ್ತೇವೆ ಅಂದ್ರೆ ಬೇಡ ಅನ್ನಲ್ಲ. ನಮ್ಮಮೊದಲ ಅಭ್ಯರ್ಥಿ ಗೆ ೪೬ ಮತ ಗಳನ್ನ ಹಾಕಿದ್ದೇವೆ. ಜಗ್ಗೇಶ್ ಅವರಿಗೆ ಮತ ಹಾಕುವುದು ಈಗ ನಡೆದಿದೆ. ನಮಗೆ ಕ್ರಾಸ್ ವೋಟಿಂಗ್ ಭಯವಿಲ್ಲ. ನಮ್ಮ ಮೂರನೇ ಅಭ್ಯರ್ಥಿ ಸುಲಭವಾಗಿ ಗೆಲ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನೂ ಓದಿ : – ಡಿಕೆಶಿಗೆ ಮತ ತೋರಿಸಿದ ರೇವಣ್ಣ – ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ
ನಮ್ಮ ಮೂವರು ಅಭ್ಯರ್ಥಿಗಳು ಗೆಲ್ತಾರೆ – ಅಶ್ವಥ್ ನಾರಾಯಣ್
ರಾಜ್ಯಸಭೆ ಚುನಾವಣೆ ನಡೆದಿದೆ. ನಾಲ್ವರು ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆದಿದೆ. ನಮ್ಮಮೂವರು ಅಭ್ಯರ್ಥಿಗಳು ಗೆಲ್ತಾರೆ. ನಮ್ಮ ಎಲ್ಲಾ ಶಾಸಕರು ಮತ ಹಾಕ್ತಿದ್ದಾರೆ. ಆತ್ಮಸಾಕ್ಷಿ ಇದ್ದರೆ ಸಿದ್ದರಾಮಯ್ಯ ಸ್ಪಷ್ಟವಾಗಿರಲಿ. ಕುಟುಂಬ ಆಧಾರಿತ ಪಕ್ಷದಲ್ಲಿರಲು ಸಾಧ್ಯವಿಲ್ಲ. ಅಧಿಕಾರದ ಆಸೆಯಿಂದ ಮೌಲ್ಯ ಕಳೆದುಕೊಂಡಿದ್ದಾರೆ ಎಂದು ಅಶ್ವಥ್ ನಾರಾಯಣ್ ತಿಳಿಸಿದ್ರು.
ಇದನ್ನೂ ಓದಿ : – ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಿಟಿ ರವಿ !