ಕಳೆದ ಬಾರಿ ನಾವು 4 ಕ್ಷೇತ್ರದಲ್ಲಿ 2 ಕ್ಷೇತ್ರದಲ್ಲಿ ಗೆದ್ದಿದ್ದೇವು. ಈ ಬಾರಿ ನಾಲ್ಕು ಕ್ಷೇತ್ರವು ಗೆಲ್ಲುವ ವಿಶ್ವಾಸ ಇದೆ. ಪದವೀಧರರು ಹಾಗೂ ಶಿಕ್ಷಕರು ಹಾಕುವ ಒಂದೊಂದು ಮತದಾನವು ರಾಜ್ಯ ಕೇಂದ್ರ ಸರ್ಕಾರದ ಕಾರ್ಯವೈಖರಿಗೆ ಹಾಕುವ ಮತವಾಗಿದೆ ಎಂದು ಮೈಸೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಮತದಾರರು ನಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಮತ ಹಾಕುವಂತೆ ನಾನು ಮನವಿ ಮಾಡುತ್ತೇನೆ. ಈ ಹಿಂದೆ ಫಲಾನುಭವಿಗೆ ಶೇ.15 ರಷ್ಟು ಮಾತ್ರ ಯೋಜನೆಯ ಲಾಭ ಧಕ್ಕುತ್ತಿತ್ತು. ನಮ್ಮ ಸರ್ಕಾರ ಕಟ್ಟಕಡೆಯ ವ್ಯಕ್ತಿಗು ಯೋಜನೆ ತಲುಪಿಸುತ್ತಿದ್ದೇವೆ. ಪಾಲಿಸಿಯಲ್ಲಿ ಹೊಸದಾದ ಕ್ರಾಂತಿ ಮಾಡಿದ ಕೀರ್ತಿ ನಮ್ಮ ಸರ್ಕಾರಕ್ಕೆ ಸಲುತ್ತೆ. NEP ಒಂದು ಕ್ರಾಂತಿಕಾರಕ ಹೆಜ್ಜೆ ಆಗಿದೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಲಾಗಿದೆ. ಬ್ಯಾಂಕ್ ಗಳಿಗೆ ಮೋಸ ಮಾಡುವವರಿಗೆ ಶಿಕ್ಷಿಸುವ ಕಾಯ್ದೆ ಬಂದಿದೆ. ಮನಸ್ಥಿತಿಗಳನ್ನ ಬದಲಿಸುವ ಪರಿಸ್ಥಿತಿ ಸುಧಾರಿಸುವ ಕಾರ್ಯ ಮೋದಿ ಅವರ ನೇತೃತ್ವದಲ್ಲಿ ಆಗ್ತಿದೆ. ಈಗಲೂ ಕೆಲವರು ಬಿಜೆಪಿಯನ್ನ ಕೋಮುವಾದಿ ಪಾರ್ಟಿ ಅಂತಾರೆ. ಆದರೆ ಅವರ ಹೇಳಿಕೆಗಳಿಗೆ ಯಾವುದೇ ಪುರಾವೆ ಇಲ್ಲ. ನಮ್ಮನ್ನು ಕೋಮುವಾದಿ ಎನ್ನುವವರಿಗೆ ಒಂದು ಪ್ರಶ್ನೆ ಕೇಳುತ್ತೇನೆ. ಶಾದಿ ಭಾಗ್ಯ ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಶಾಲಾ ಪ್ರವಾಸ ಭಾಗ್ಯ ಒಂದು ವರ್ಗದ ಮಕ್ಕಳಿಗೆ ಮಾತ್ರ ಸೀಮಿತವಾಗಿದೆ. ಈಗ ಅವರೇ ಹೇಳಬೇಕು ಯಾರು ಕೋಮುವಾದಿ ಓಲೈಕೆ ರಾಜಕಾರಣ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ : – ದಾಂಧಲೆ ನಡೆಸಿದವರನ್ನ ಬಂಧಿಸುವ ಬದಲು ಕಂಡಲ್ಲಿ ಗುಂಡಿಕ್ಕಿ – ಸೊಗಡು ಶಿವಣ್ಣ
ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ ಸಿ.ಟಿ ರವಿ
ಸಿದ್ದರಾಮಯ್ಯ ಅವರಿಗೆ ದೃಷ್ಠಿ ದೋಷ ಇದೆ. ಇದಕ್ಕೆ ಸೂಕ್ತ ಚಿಕಿತ್ಸೆ ಆಗಬೇಕು. RSS ಕೋಮುವಾದಿ ಕೋಮುವಾದಿ ಅಂತೀರಾ.ನಿಮಗೆ ದೃಷ್ಟಿ ದೋಷದ ಕಾರಣಕ್ಕೆ ಹೀಗೆ ಅನಿಸುತ್ತಿದೆ. ನಿಮ್ಮ ಅಕ್ಕಪಕ್ಕದಲ್ಲೇ ದ್ವೇಷದ ಬೀಜ ಬಿತ್ತುವವರು ಇದ್ದಾರೆ. ನಿಮ್ಮದೆ ಪಕ್ಷದ ಶಾಸಕರ ಮನೆಗೆ ಬೆಂಕಿ ಇಟ್ಟಾಗ ಬೆಂಕಿ ಇಟ್ಟವರಿಗೆ ಸಹಕಾರ ನೀಡುವ ಕೆಲಸ ನಿಮ್ಮವರೇ ಮಾಡಿದ್ರು. ನಿಮಗೆ ಆಧಾರ ಏನಿದೆ? ಯಾವ ದೃಷ್ಟಿಯಲ್ಲಿ ಹೇಳ್ತಿರಾ. ನಿಮ್ಮದೆ ಸರ್ಕಾರ ಇದ್ದಾಗ ಯಾಕೆ ಕ್ರಮ ಕೈಗೊಂಡಿಲ್ಲ. RSSಗೆ ನಿಮ್ಮ ಸರ್ಟಿಫಿಕೇಟ್ ಬೇಕಿಲ್ಲ. ಜನರ ಸರ್ಟಿಫಿಕೇಟ್ ನಮಗೆ ಈಗಾಗಲೇ ಸಿಕ್ಕಿದೆ ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ರು.
ಇದನ್ನೂ ಓದಿ : – ಬೀದಿಗೆ ಬಿದ್ದ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಜಗಳ- ಡಿ ರೂಪಾ, ರಾಘವೇಂದ್ರ ಶೆಟ್ಟಿ ಪತ್ರ ಸಮರ