ಉಕ್ರೇನ್ ಜೊತೆ ಮಾತುಕತೆ ನಡೆದಿರುವ ಮಧ್ಯೆಯೇ ರಷ್ಯಾ 36 ರಾಷ್ಟ್ರಗಳ ವಿಮಾನಗಳಿಗೆ ನಿರ್ಬಂಧ ವಿಧಿಸಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ 5 ದಿನ ಕಳೆದಿದ್ದು, ಬೈಲೋರಷ್ಯಾದಲ್ಲಿ ಎರಡೂ ದೇಶಗಳ ರಾಜತಾಂತ್ರಿಕ ನಿಯೋಗ ಮಾತುಕತೆ ನಡೆಸಿದೆ.
ಮಾತುಕತೆ ವೇಳೆ ರಷ್ಯಾ ಕೂಡಲೇ ಸೇನೆಯನ್ನು ಹಿಂಪಡೆಯಬೇಕು. ಅಲ್ಲಿಯವರೆಗೂ ಮಾತುಕತೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದಿದೆ. ಇದರ ನಡುವೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 36 ರಾಷ್ಟ್ರಗಳ ವಿಮಾನಗಳಿಗೆ ನಿರ್ಬಂಧ ಘೋಷಿಸಿದ್ದಾರೆ.