ರಾಯಚೂರು ಶಾಸಕ ಶಿವರಾಜ್ ಪಾಟೀಲ್ ವಿರುದ್ಧ ಕಿಡ್ನಾಪ್ ಆರೋಪ ಕೇಳಿ ಬಂದಿದೆ. ರಾಯಚೂರು ನಗರಸಭೆ ಸದಸ್ಯೆ ಶೈನಾಜ್ ಬೇಗಂ ಪುತ್ರಕಮಿಷನರ್ ಗೆ ದೂರು ನೀಡಿದ್ದಾರೆ. ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶೈನಾಜ್ ಬೇಗಂ ದಾಖಲಾಗಿದ್ದರು. ಬೆಳಗ್ಗೆ 5ಗಂಟೆಗೆ ಇನೋವಾ ಕಾರಿನಲ್ಲಿ ಬೇಗಂನನ್ನ ಕಿಡ್ನಾಪ್ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಬೇಗಂ ರಾಯಚೂರು 26ನೇ ವಾರ್ಡ್ ನ ನಗರಸಭಾ ಸದಸ್ಯೆಯಾಗಿದ್ದಾರೆ. ನಾಳೆ ರಾಯಚೂರು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗ್ತಿದೆ. ಈ ಚುನಾವಣೆಗೆ ಬೇಗಂರನ್ನ ಗೈರಾಗುವಂತೆ ಮಾಡಲು ಕಿಡ್ನಾಪ್ ಮಾಡಲಾಗಿದೆ ಎಂದು ಪುತ್ರ ಆರೋಪಿಸಿದ್ದಾನೆ.
ಶಾಸಕ ಶಿವರಾಜ್ ಪಾಟೀಲ್ ಕಡೆಯವರಿಂದ ಕಿಡ್ನಾಪ್ ಆಗಿದೆ. ನನ್ನ ತಾಯಿಗೆ ಮತ್ತು ನನಗೆ ಏನಾದ್ರು ಆದ್ರೆ ಶಿವರಾಜ್ ಪಾಟೀಲ್ ನೇರ ಕಾರಣ ಎಂದು ದೂರು ನೀಡಿದ್ದು ತಾಯಿಯನ್ನ ರಕ್ಷಿಸುವಂತೆ ದೂರಿನಲ್ಲಿ ತಿಳಿಸಿದ್ದಾನೆ. ಸಿಸಿಟಿವಿಯಲ್ಲಿ ಕಾರಿನಲ್ಲಿ ಕಿಡ್ನಾಪ್ ಮಾಡೋ ದೃಶ್ಯ ಸಿಕ್ಕಿದೆ. ಹೀಗಾಗಿ ಕಮಿಷನರ್ ಗೆ ದೂರು ನೀಡಿದ್ದೇವೆ ಎಂದು ತಿಳಿಸಿದ್ದಾನೆ.