ದೇಶದಲ್ಲಿ ಕೊರೊನಾ ಎರಡನೇ ಅಲೆ ಭೀತಿ ಎಲ್ಲೆಡೆ ಶುರುವಾಗಿದ್ದು, ಬಾಲಿವುಡ್ನಿಂದ ಹಿಡಿದು ಸ್ಯಾಂಡಲ್ವುಡ್ನ ಹಲವಾರು ನಟ ನಟಿಯರು ಕೊವಿಡ್ ಸೋಂಕಿಗೆ ಒಳಗಾಗಿದ್ದಾರೆ. ಈಗ ಸ್ಯಾಂಡಲ್ವುಡ್ ನಟಿ ಅನು ಪ್ರಭಾಕರ್‌ಗೆ ಕೊರೊನಾ ಪಾಸಿಟಿವ್ ಬಂದಿದೆ.
ಈ ಬಗ್ಗೆ ಅನು ಪ್ರಭಾಕರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಎಷ್ಟೇ ಸುರಕ್ಷಿತವಾಗಿ, ಮುನ್ನೆಚ್ಚರಿಕೆಯಿಂದ ಇದ್ದರೂ ಕೊರೊನಾ ಪಾಸಿಟಿವ್ ಬಂದಿದೆ. ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಅನು ಪ್ರಭಾಕರ್ ಮಾಹಿತಿ ಹಂಚಿಕೊಂಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ. ನನ್ನ ಕುಟುಂಬದವರಿಗೆ ನೆಗೆಟಿವ್ ಬಂದಿದೆ. ನನ್ನ ಜೊತೆ ಸಂಪರ್ಕದಲ್ಲಿದ್ದವರು ಪರೀಕ್ಷೆ ಮಾಡಿಕೊಳ್ಳಿ ಎಂದು ಟ್ವೀಟರ್ನಲ್ಲಿ ಬರೆದುಕೊಂಡದ್ದಾರೆ.
ನನಗೆ ಕೊರೊನಾ ಪಾಸಿಟಿವ್ ಬಂದಿದೆ. ಆದರೆ ನನ್ನ ವರದಿ ಇನ್ನೂ ಕೋವಿಡ್ ವಾರ್ ವೆಬ್‍ಸೈಟ್‍ನಲ್ಲಿ ಅಪ್ ಲೋಡ್ ಆಗಿಲ್ಲ. ಜೊತೆಗೆ ನನಗೆ ಬಿಯೂ ನಂಬರ್ ಕೂಡ ಬಂದಿಲ್ಲ. ಬಿಬಿಎಂಪಿ ಕಡೆಯಿಂದ ಯಾವುದೇ ಕರೆ ಬಂದಿಲ್ಲ. ನಿಮ್ಮ ಗಮನಕ್ಕೆ ತರುತ್ತಿದ್ದೇನೆ ಎಂದು ಟ್ವೀಟ್ ಮಾಡುವ ಮೂಲಕವಾಗಿ ಆರೋಗ್ಯ ಸಚಿವರಾದ ಸುಧಾಕರ್ ಅವರಿಗೆ ತಿಳಿಸಿದ್ದಾರೆ. ಅನುಪ್ರಭಾಕರ್ ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ,
ಮೊನ್ನೆ ಮೊನ್ನೆಯಷ್ಟೇ ನಟಿ ಸಂಜನಾ ಗಲ್ರಾನಿ ಕೊರೊನಾ ಸೋಂಕಿಗೆ ತುತ್ತಾಗಿರುವುದನ್ನು ಹೇಳಿಕೊಂಡಿದ್ದರು. ಕಳೆದ ವರ್ಷ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಮಗ ಅಭಿಷೇಕ್ ಮತ್ತು ಇಡೀ ಕುಟುಂಬ ಸೋಂಕಿಗೆ ಒಳಗಾಗಿ ಬಹಳ ದಿನ ಆಸ್ಪತ್ರೆಯಲ್ಲಿದ್ದರು. ಇತ್ತೀಚೆಗೆ ನಟ ಹಾಗೂ ಕೊಡುಗೈ ದಾನಿ ಸೋನು ಸೂದ್ ಕೂಡ ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟ ಪ್ರಜ್ವಲ್ ದೇವರಾಜ್ ಕುಟುಂಬ ಕೂಡ ಕೊರೊನಾ ಸೋಂಕಿಗೆ ತುತ್ತಾಗಿ ಎರಡು ವಾರ ಆಗಿದೆ.