ತಾಯೇ ಸವದತ್ತಿ ಯಲ್ಲಮ್ಮ.ಕುಡುಕರು ನನ್ನ ಗಂಡನ ಜೊತೆಗೆ ಸ್ನೇಹ ಮಾಡದಿರಲಿ. ಗಂಡನಿಗೆ ಕುಡಿತ ಚಟ ಬಿಡಿಸು, ಗಂಡನ ಕುಡುಕ ಸ್ನೇಹಿತರನ್ನ ಬಿಡಿಸು. ಕುಡುಕರು ನನ್ನ ಗಂಡನ ಜೊತೆಗೆ ಸ್ನೇಹ ಮಾಡದಂತೆ ಕಾಪಾಡು ಎಂದು ಭಕ್ತೆಯೊಬ್ಬರು ಯಲ್ಲಮ್ಮ ದೇವಿಗೆ ಮನವಿ ಮಾಡಿದ್ದಾರೆ. ಹೌದು. ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಿನ್ನೆ ನಡೆಯಿತು.
ಇದನ್ನು ಓದಿ :- ಕನಕಗಿರಿ ಜಾತ್ರೆಯಲ್ಲಿ ಅಪ್ಪು ಅಭಿಮಾನಿ ಫೋಟೋ ಹಿಡಿದು ಕಣ್ಣೀರು
ಈ ವೇಳೆ ಯಲ್ಲಮ್ಮನ ಹುಂಡಿಯಲ್ಲಿ ವಿಚಿತ್ರ ಹರಕೆ ಚೀಟಿಗಳು ಪತ್ತೆಯಾಗಿದೆ. ಕೋಟಿ ಕೋಟಿ ದೇಣಿಗೆ ಹಣದ ಜೊತೆಗೆ ಹರಕೆ ಚೀಟಿಯನ್ನ ಭಕ್ತರು ಹಾಕಿದ್ದಾರೆ. ಮಗಳಿಗೆ ನಮಗಿಂತ 100 ಪಟ್ಟು ಅಧಿಕ ಆಸ್ತಿಯಿರುವ ಯುವಕನೊಂದಿಗೆ ಕಲ್ಯಾಣ ಪ್ರಾಪ್ತಿಗೊಳಿಸು. ನನಗೆ ಪಿಎಸ್ಐಯ ಹುದ್ದೆ ಕರುಣಿಸು. ಅಮ್ಮ ನನ್ನ ಬಳಿ ಸಾಲ ಪಡೆದವರು ನಿನ್ನ ದಯೆಯಿಂದ ಮರಳಿಸುವಂತೆ ಮಾಡು.
ಹೀಗೆ ವಿವಿಧ ಬಗೆಯ ಹರಕೆ ಚೀಟಿ ಹಾಕಿ ಭಕ್ತರು ದೇವಿಯಲ್ಲಿ ಪ್ರಾರ್ಥಿಸಿದ್ದಾರೆ. ಫೆಬ್ರವರಿ 1 ರಿಂದ ಮಾರ್ಚ್ 15ರವರೆಗೆ ಅವಧಿಯಲ್ಲಿ ದಾಖಲೆ ಮೊತ್ತ ಸಂಗ್ರಹವಾಗಿದೆ. ನಾಲ್ಕು ದಿನದ ಹುಂಡಿ ಎಣಿಕೆಯಲ್ಲಿ 1.30ಕೋಟಿ ನಗದು 12 ಲಕ್ಷ ಮೌಲ್ಯದ ಚಿನ್ನಾಭರಣ, 30 ಲಕ್ಷ ಮೌಲ್ಯದ ಬೆಳ್ಳಿಯ ಆಭರಣ ದೇಣಿಗೆ ನೀಡಿದ್ದಾರೆ.
ಇದನ್ನು ಓದಿ :- ಊರ ಜಾತ್ರೆಯಲ್ಲಿ ಸಿದ್ದರಾಮಯ್ಯ ಸಖತ್ ಸ್ಟೆಪ್ ..!