ಬೆಂಗಳೂರಿ (Bengaluru) ನಲ್ಲಿ ಬೇರೆ ರಾಜ್ಯದ ಯುವಕ ಯುವತಿಯರಿಗೆ ಆರೋಪಿಗಳು ಮಾಸ್ ಕಾಪಿ ಮಾಡಿಸಿ ನರ್ಸಿಂಗ್ ಎಕ್ಸಾಮ್ (Nursing exam) ಬರೆಸಿದ್ದರು. ಮೂವರು ಆರೋಪಿಗಳು ನರ್ಸಿಂಗ್ ಎಕ್ಸಾಮ್ ಡೀಲ್ ನಡೆಸ್ತಿದ್ದರು. ಜಿಯಾ ಹಕ್, ಪಲ್ಲಬ್ ಮೈತಿ, ಅಥುರು ಸಮಂತಾ ಎಂಬಾ ಆರೋಪಿಗಳಿಗಾಗಿ ಯಶವಂತಪುರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಲಕ್ಷಾಂತರ ರೂಪಾಯಿ ಹಣ ಪಡೆದು ಆರೋಪಿಗಳು ಮಾಸ್ ಕಾಪಿ ಮಾಡಿಸ್ತಿದ್ದರು . ಇದೀಗ ಯಶವಂತಪುರ (Yeshwanth pura ) ಪೊಲೀಸರು ನರ್ಸಿಂಗ್ ಬೋರ್ಡ್ ಗೆ ಪತ್ರ ಬರೆದಿದ್ದಾರೆ. ಸೀರಿಯಲ್ ನಂಬರ್ ಇಟ್ಕೊಂಡು ಪೊಲೀಸರು ಮಾಹಿತಿ ಕೇಳಿದ್ದಾರೆ. ಅಷ್ಟೇ ಅಲ್ಲದೆ ಆರೋಪಿಗಳು ರಜಿಯಾ ಸುಲ್ತಾನಾ ಎಂಬುವರಿಂದಲೂ ಎಕ್ಸಾಮ್ ಬರೆಸದೆ ಫೇಕ್ ಕಾಲೇಜಿನಲ್ಲಿ ಅಡ್ಮಿಷನ್ ಲೆಟರ್ ಕೊಟ್ಟಿದ್ದಾರೆ. ಇದನ್ನು ಓದಿ : – ಕಾಂಗ್ರೆಸ್ ನವರು SC-ST ಮತ ಕಬಳಿಸಲು ಜನರ ದಿಕ್ಕು ತಪ್ಪಿಸುತ್ತಿದ್ದಾರೆ – ಸಿಎಂ ಬೊಮ್ಮಾಯಿ
ಆರೋಪಿಗಳು 1.20 ಲಕ್ಷ ಪಡೆದು ಫೇಕ್ ಕಾಲೇಜಿನ ಅಡ್ಮಿಷನ್ ಲೆಟರ್ ಕೊಡಿಸಿದ್ದಾರೆ. HPR school of Nursing ಹೆಸರಲ್ಲಿ ಫೇಕ್ ಅಡ್ಮಿಷನ್ ಲೆಟರ್ ಮಾಡಿಸಿದ್ದಾರೆ. ಆರೋಪಿಗಳ ಪತ್ತೆಗೆ ಯಶವಂತಪುರ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನು ಓದಿ : – ಭಾರತ-ಚೀನಾ ಗಡಿಯಲ್ಲಿ ಸೈನಿಕರ ಸಂಘರ್ಷ – ಮಧ್ಯಾಹ್ನ ಸಂಸತ್ತಿನ ಉಭಯ ಸದನಗಳಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಷಣ