ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸಿರುವ ರಾಹುಲ್ ಗಾಂಧಿ (RAHUL GANDHI)ನೇತೃತ್ವದ ಭಾರತ್ ಜೋಡೋ ಯಾತ್ರೆ ಭದ್ರತಾ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಕೇಂದ್ರಾಡಳಿತ ಸರ್ಕಾರ ಸೂಕ್ತ ಭದ್ರತೆ ನೀಡುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
J&K UT Adminstration failed to provide security to #BharatJodoYatra led by Shri @RahulGandhi .
Security lapses indicate unfair & unprepared attitude of UT adminstration. @OfficeOfLGJandK pic.twitter.com/hQoCIraZIO
— Rajani Patil (@rajanipatil_in) January 27, 2023
ಇಂದು ಬೆಳಗ್ಗೆ ರಾಮ್ಬಾಫನ್ ಜಿಲ್ಲೆಯ ಕ್ವಾಜಿಗುಂಡ್ನಿಂೆದ ಭಾರತ್ ಜೋಡೋ (BHARATH JODO)ಯಾತ್ರೆ ಪುನರ್ ಆರಂಭವಾಗಿತ್ತು. ಆದರೆ ಭದ್ರತಾ ಲೋಪದಿಂದ ಬನಿಹಾಲ್‌ನ ಖಾಜಿಗುಂಡ್ ಸಮೀಪ ದಿಢೀರ್ ಸ್ಥಗಿತಗೊಂಡಿದೆ. ಎಐಸಿಸಿ ಉಸ್ತುವಾರಿ ರಜನಿ ಪಾಟೀಲ್ ಟ್ವೀಟ್ ಮಾಡಿದ್ದು, ಜಮ್ಮು ಕಾಶ್ಮೀರ ಆಡಳಿತವು “ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಭದ್ರತೆ ಒದಗಿಸಲು ವಿಫಲವಾಗಿದೆ. ಭದ್ರತಾ ಲೋಪಗಳು ಕೇಂದ್ರಾಡಳಿತ ಅಸಮರ್ಥತೆ ಮತ್ತು ತಯಾರಿ ಇಲ್ಲದ ವರ್ತನೆಯನ್ನು ಸೂಚಿಸುತ್ತವೆ” ಎಂದು ಆರೋಪಿಸಿದ್ದಾರೆ. ಇದನ್ನು ಓದಿ :- ಸ್ಯಾಂಟ್ರೋ ರವಿ ಆತ್ಮಹತ್ಯೆಗೆ ಯತ್ನಿಸಿದ್ದಾನಂತೆ ಇದು ಆತ್ಮಹತ್ಯೆ ಯತ್ನವೋ, ಕೊಲೆ ಯತ್ನವೋ? – ಕಾಂಗ್ರೆಸ್ ಪ್ರಶ್ನೆ
ಖಾಜಿಗುಂಡ್ ತಲುಪಿದ ನಂತರ ರಾಹುಲ್ ಗಾಂಧಿ ಅವರು ಯೋಜನೆಯ ಪ್ರಕಾರ ದಕ್ಷಿಣ ಕಾಶ್ಮೀರದ ವೆಸ್ಸು ಕಡೆಗೆ ನಡೆಯಲು ಪ್ರಾರಂಭಿಸಿದರು. ಆದರೆ ಕಾಂಗ್ರೆಸ್ ಕಾರ್ಯಕರ್ತರು ಇದ್ದಕ್ಕಿದ್ದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ನಿರ್ವಹಿಸಬೇಕಾದ ಹೊರ ಕವಚವು ಕಣ್ಮರೆಯಾಯಿತು ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ರಾಹುಲ್ ಗಾಂಧಿಯವರು ಇಂದು 11 ಕಿಲೋಮೀಟರ್ ಪಾದಯಾತ್ರೆ ಮಾಡಬೇಕಿತ್ತು. ಆದರೆ ಅವರು ಕೇವಲ 500 ಮೀಟರ್ ನಡೆದ ನಂತರ ಅವರು ಯಾತ್ರೆ ಸ್ಥಳಗಿತಗೊಳಿಸಲಾಗಿದೆ.
ಇದನ್ನು ಓದಿ :- ಕುಮಾರಸ್ವಾಮಿ ಕೊಕ್ಕರೆ ಇದ್ದಂತೆ.. ಎಲ್ಲೆಲ್ಲಿ ಮೀನಿರುತ್ತೆ ಅಲ್ಲಲ್ಲಿ ಹೋಗ್ತಿರುತ್ತಾರೆ – ಸಿ.ಪಿ ಯೋಗೇಶ್ವರ್