‘ಅಲ್ಲಾಹು ಅಕ್ಬರ್’ ಎಂದು ಕೂಗಿ ಸುದ್ದಿಯಾಗಿದ್ದ ವಿದ್ಯಾರ್ಥಿನಿ ಪೊಲೀಸರನ್ನು ಯಾಮಾರಿಸಿ ವಿದೇಶಕ್ಕೆ ಹಾರಿದ್ದಾರೆ. ವಿದ್ಯಾರ್ಥಿನಿ ಮುಸ್ಕಾನ್ ಕುಟುಂಬ ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡದೆ ಸೌದಿ ಪ್ರವಾಸಕ್ಕೆ ಹೊರಟಿದೆ.
ಈ ಪ್ರವಾಸದ ಹಿಂದೆ ಏನಾದರೂ ಇದ್ಯಾ ಎಂಬುದರ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಳ್ಳುತ್ತಿದೆ. ಈ ಹಿಂದೆ ಮುಸ್ಕಾನ್ ಅಲ್ಲಾಹು ಅಕ್ಬರ್ ಎಂದು ಕೂಗಿ ಭಾರೀ ಸುದ್ದಿಯಾಗಿದ್ದರು. ಈ ಹೇಳಿಕೆ ಹಿನ್ನೆಲೆ ಉಗ್ರ ಸಂಘಟನೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ಅಲ್ ಖೈದಾ ಸಂಘಟನೆ ಮುಸ್ಕಾನ್ ಹೊಗಳಿ ಗುಣಗಾನ ಮಾಡಿತ್ತು. ಇದನ್ನೂ ಓದಿ : – ಆಸಾನಿಚಂಡಮಾರುತದ ಎಫೆಕ್ಟ್ – ಬೆಂಗಳೂರಿನಲ್ಲಿ ಇಂದು ಕೂಡ ಮೋಡ ಕವಿದ ವಾತಾವರಣ
ಇದರಿಂದ ಮುಸ್ಕಾನ್ ಬಗ್ಗೆ ಹೆಚ್ಚು ತನಿಖೆ ಮಾಡುವಂತೆ ಆಗ್ರಹ ಮಾಡಲಾಗಿತ್ತು. ಪರಿಣಾಮ ಪೊಲೀಸ್ ಇಲಾಖೆ ಮುಸ್ಕಾನ್ ಮತ್ತು ಕುಟುಂಬದವರನ್ನು ವಿಚಾರಣೆ ನಡೆಸಿತ್ತು. ಈ ನಡುವೆ ಮುಸ್ಕಾನ್ ಮನೆಗೆ ಬಂದೋಗುವವರ ಮೇಲೆ ಪೊಲೀಸ್ ಇಲಾಖೆ ಒಂದು ಕಣ್ಣು ಇಟ್ಟಿತ್ತು. ಆದರೆ ಈ ಕುಟುಂಬ ಖಾಕಿಗೆ ಮಾಹಿತಿ ನೀಡದೆ ಕಳೆದ ಏಪ್ರಿಲ್ 25 ರಂದೇ ಸೌದಿಗೆ ತೆರಳಿದೆ.
ಇದನ್ನೂ ಓದಿ : – ದೆಹಲಿಯಲ್ಲಿ ಸಿಎಂ – ಇಂದು ಹೈಕಮಾಂಡ್ ನಿಂದ ಬಿಗ್ ಸಂದೇಶ ನಿರೀಕ್ಷೆ