ಮಹಾರಾಷ್ಟ್ರದಲ್ಲಿ ಶಿವಸೇನೆ ( shiva sena ) ಹಾಗೂ ಸರ್ಕಾರದಲ್ಲಿನ ಬಿಕ್ಕಟ್ಟಿನ ನಡುವೆ ಬಂಡಾಯ ಶಾಸಕ ಏಕನಾಥ್ ಶಿಂಧೆ ತಮ್ಮ ಬಣಕ್ಕೆ ಶಿವಸೇನೆ ಬಾಳಾಸಾಹೇಬ್ ಹೆಸರು ನೀಡಲು ಮುಂದಾಗಿದ್ದಾರೆ.
ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಈಗಿನ ಬಂಡಾಯ ಶಾಸಕರ ಪೈಕಿ ಗುರುತಿಸಿಕೊಂಡಿರುವ ಗೃಹ ಸಚಿವ ದೀಪಕ್ ಕೆಸರ್ಕರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಏಕನಾಥ್ ಶಿಂಧೆ ನೇತೃತ್ವದಲ್ಲಿರುವ ಶಾಸಕರು ಶಿವಸೇನಾ ಬಾಳಾಸಾಹೇಬ್ ಎಂಬ ಹೊಸ ಬಣವನ್ನು ರಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪಕ್ಷದ ಸಂಸ್ಥಾಪಕರ ಹೆಸರನ್ನು ಯಾರೂ ಬಳಸಕೂಡದು
ಯಾರೂ ಕೂಡಾ ಪಕ್ಷದ ಸಂಸ್ಥಾಪಕರ ಹೆಸರನ್ನು ಬಳಸಕೂಡದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ( Uddhav Thackeray ) ಖಡಕ್ ಸಂದೇಶ ರವಾನಿಸಿದ್ದಾರೆ. ಶಿವಸೇನೆ ಪಕ್ಷದ ಕಚೇರಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದ ಅವರು, ‘ಏನಾದರೂ ಹೇಳುವಂತೆ ಕೆಲವರು ನನನ್ನು ಕೇಳುತ್ತಿದ್ದಾರೆ. ಆದರೆ, ಬಂಡಾಯ ಶಾಸಕರು ತಮ್ಮಗಿಷ್ಟ ಬಂದಂತೆ ಮಾಡಲಿ ಎಂದು ಈಗಾಗಲೇ ಹೇಳಿದ್ದೇನೆ. ಅವರ ವಿಚಾರದಲ್ಲಿ ನಾನು ಮಧ್ಯ ಪ್ರವೇಶ ಮಾಡಲ್ಲ. ಅವರು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಆದರೆ, ಯಾರೂ ಕೂಡಾ ಬಾಳಸಾಹೇಬ್ ಠಾಕ್ರೆ ಹಸರು ಬಳಸಬಾರದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ : – ಶಿವಸೇನೆ ಹೆಸರು ಬಳಸದಂತೆ ಶಿಂಧೆಗೆ ಠಾಕ್ರೆ ಸವಾಲ್
ಗುವಾಹಟಿಯಲ್ಲಿ ಶಿವಸೇನೆಯ 38 ಬಂಡಾಯ ಶಾಸಕರಿದ್ದಾರೆ. ಈ ನಡುವೆ ಶಿವಸೇನೆಯ ಕಾರ್ಯಕರ್ತರು ಪುಣೆಯಲ್ಲಿ ಬಂಡಾಯ ಶಾಸಕ ತನಾಜಿ ಸಾವಂತ್ ಅವರ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ.
ಏಕನಾಥ್ ಶಿಂಧೆ ಅವರ ಭದ್ರ ಕೋಟೆಯಾಗಿರುವ ಥಾಣೆಯಲ್ಲಿ ಜಿಲ್ಲಾಡಳಿತ ಜೂ.30 ವರೆಗೆ ಯಾವುದೇ ರಾಜಕೀಯ ಮೆರವಣಿಗೆ ಸಭೆಗಳನ್ನು ನಡೆಸದಂತೆ ಸೆಕ್ಷನ್ 144 ನ್ನು ಜಾರಿಗೊಳಿಸಿದ್ದು, ಈ ಬೆನ್ನಲ್ಲೇ ಮುಂಬೈ ನಲ್ಲೂ ಸೆಕ್ಷನ್ 144 ನ್ನು ಜಾರಿಗೊಳಿಸಲಾಗಿದೆ.
ಇದನ್ನೂ ಓದಿ : – NDA ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಆಯ್ಕೆ ಹಿನ್ನೆಲೆ- ಸಿಎಂ ಚೌಹಾಣ್ ಡ್ಯಾನ್ಸ್ ವಿಡಿಯೋ ವೈರಲ್ !