ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ಥಕ್ಕೀಡಾಗಿರುವ ಘಟನೆ ಬಳ್ಳಾರಿ ( ballari ) ಜಿಲ್ಲೆಯ ಸಂಡೂರು ತಾಲ್ಲೂಕಿನ ಅಂಕನಾಲ್ ಗ್ರಾಮದಲ್ಲಿ ನಿನ್ನೆ ನಡೆದಿದೆ.
ನಿನ್ನೆ ಸಂಜೆ ವೇಳೆಗೆ 49 ಜನರಿಗೆ ಕಾಣಿಕೊಂಡಿದ್ದ ವಾಂತಿ ಭೇದಿ ಇದೀಗ 84 ಕ್ಕೇರಿಕೆಯಾಗಿದೆ. ಕಳೆದ 15 ದಿನಗಳಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ನಡೆಯುತ್ತಿರುವ ಎರಡನೇ ಪ್ರಕರಣವಿದು. ಹತ್ತು ದಿನಗಳ ಹಿಂದೆ ಗೋಣಲ್ ತಾಲ್ಲೂಕಿನಲ್ಲಿ ಬಾಲಕಿಯೊಬ್ಬಳು ಕಲುಷಿತ ನೀರು ಸೇವಿಸಿ ಅಸ್ವಸ್ಥಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು. ಅಲ್ಲದೆ ಆ ಸಮಯದಲ್ಲಿ 30ಕ್ಕೂ ಹೆಚ್ಚು ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದನ್ನು ಓದಿ : – ಹುಬ್ಬಳ್ಳಿ-ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ಕಾರು ಅಪಘಾತ – ಒಂದೇ ಕುಟುಂಬದ ಮೂವರ ಸಾವು ಓರ್ವ ಮಹಿಳೆಗೆ ಗಂಭೀರ ಗಾಯ
ಗೋಣಲ್ ಪ್ರಕರಣದ ನಂತರ ಜಿಲ್ಲಾಡಳಿತ ಇಂತಹ ಘಟನೆ ಮರುಕಳಿಸದಂತೆ ಕ್ರಮಗಳನ್ನು ಕೈಗೊಂಡಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ನಿರಂತರವಾಗಿ ವೈದ್ಯರು ಪರಿಸ್ಥಿತಿಯ ನಿಗಾವಹಿಸುತ್ತಿದ್ದರು. ಇಷ್ಟೆಲ್ಲಾ ಕ್ರಮಗಳನ್ನು ಕೈಗೊಂಡಿದ್ದರೂ ಕೂಡ ಮತ್ತೊಂದು ಅಂತಹದೇ ಪ್ರಕರಣ ಮರುಕಳಿಸಿದೆ. ಅಂಕನಾಲ್ ಗ್ರಾಮದಲ್ಲಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದಾಗ ಬಂದ ವರದಿಯೆಂದರೆ ಕಲುಷಿತ ನೀರು ಸೇವಿಸಿ ಹೀಗೆ ಜನರು ಅಸ್ವಸ್ಥಕ್ಕೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : – ರಾಷ್ಟ್ರ ಧ್ವಜ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಅವರಿಗೆ ನಾಚಿಕೆ ಆಗಬೇಕು – ಜಗದೀಶ್ ಶೆಟ್ಟರ್