ಮೊದಲ ಮುಖ್ಯಮಂತ್ರಿ ಕೊಟ್ಟ ಜಿಲ್ಲೆ ಕೋಲಾರ. ಈಗ ಮತ್ತೊಮ್ಮೆ ವಿಪಕ್ಷ ನಾಯಕ ಸಿದ್ದರಾಮಯ್ಯ (SIDDARAMAIAH )ಅವರನ್ನು ಗೆಲ್ಲಿಸಿ ಎರಡನೇ ಬಾರಿಗೆ ಮುಖ್ಯಮಂತ್ರಿಯನ್ನು ರಾಜ್ಯಕ್ಕೆ ನೀಡುತ್ತೇವೆ. ಸಿದ್ದರಾಮಯ್ಯ ಕೋಲಾರ(KOLARA )ಕ್ಕೆ ಬಂದರೆ ಸ್ವಾಗತಾರ್ಹ ಎಂದು ಶಾಸಕ ಕೆ.ಶ್ರೀನಿವಾಸಗೌಡ (SRINIVAS GOWDA ) ಹೇಳಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದರೆ ಗೆಲುವು ಖಚಿತ. ನಾನು 4 ಬಾರಿ ಗೆದ್ದು ಶಾಸಕನಾಗಿರುವೆ. ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ಗೆಲ್ಲಿಸಿ ಕಳುಹಿಸುತ್ತೇವೆ. ಸಿದ್ದರಾಮಯ್ಯ ಬಂದರೆ ನಾನು ಕ್ಷೇತ್ರ ಬಿಟ್ಟು ಕೊಡಲು ಸಿದ್ದನಾಗಿರುವೆ ಎಂದು ಹೇಳಿದ್ರು.
ಇದನ್ನೂ ಓದಿ : – ಕಳಪೆ ರಸ್ತೆ ನಿರ್ಮಿಸಿದ ಗುತ್ತಿಗೆದಾರನಿಗೆ BBMP 3 ಲಕ್ಷ ರೂ. ದಂಡ..!