ರಾಜ್ಯ ವಿಧಾನಸಭೆ ಚುನಾವಣೆ 2023ರಲ್ಲಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ (CONGRESS)ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ(SIDDARAMAIAH) ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗಾಗಿ ಕಾಂಗ್ರೆಸ್ ಮುಖಂಡರು ಮನೆ ಫಿಕ್ಸ್ ಮಾಡಿದ್ದಾರೆ. ಕಳೆದ 10 ದಿನಗಳಿಂದ ಮನೆಗಾಗಿ ಕಾಂಗ್ರೆಸ್ ನಾಯಕರು ಹುಡುಕಾಟ ನಡೆಸುತ್ತಿದ್ದರು.
ಕೋಲಾರ ನಗರ ಹೊರವಲಯದ ಕೋಗಿಲಹಳ್ಳಿ ಗ್ರಾಮದಲ್ಲಿ ಮನೆ ಫಿಕ್ಸ್ ಆಗಿದೆ. ಸುಮಾರು ಒಂದು ಎಕರೆಯ ತೋಟದಲ್ಲಿ ಈ ಮನೆ ಇದೆ. ಕೋಲಾರ ನಗರದ ಕುರುಬರ ಪೇಟೆ ನಿವಾಸಿ ಶಂಕರ್ ಎನ್ನುವರ ಒಡೆತನದ ಮನೆ ಇದ್ದಾಗಿದೆ. ಶಂಕರ್ ಮೂಲತಃ ಸಿದ್ದರಾಮಯ್ಯ ಅವರ ಅಭಿಮಾನಿ. ವಾಸ್ತು ಪ್ರಕಾರ ಸೂರ್ಯ ಹುಟ್ಟುವ ಬಾಗಿಲಿರೊ ಮನೆಯನ್ನೆ ಹುಡುಕಿದ್ದಾರೆ ಕಾಂಗ್ರೆಸ್ ನಾಯಕರು. ವಾಸ್ತು ಪ್ರಕಾರದ ಮನೆಯನ್ನೆ ಹುಡುಕುವಂತೆ ತಿಳಿಸಿದ್ದ ಯತೀಂದ್ರ ಸಿದ್ದರಾಮಯ್ಯ. ಇದನ್ನು ಓದಿ :- ರಾಜ್ಯದಲ್ಲಿ ಏಪ್ರಿಲ್ 10 ರಿಂದ ನೀತಿ ಸಂಹಿತೆ ಜಾರಿ ಸಾಧ್ಯತೆ…!
1 ಎಕರೆಯ ಪ್ರದೇಶದಲ್ಲಿ 56 ಉದ್ದ, 46 ಅಗಲದ ವಿಸ್ತೀರ್ಣದ ಮನೆ. ನೆಲಮಹಡಿಯ ಐಷಾರಾಮಿ ಮನೆಯಲ್ಲಿದೆ ಹಾಲ್, ಡೈನಿಂಗ್ ಹಾಲ್, ಎರಡು ರೂಂ, ದೇವರ ಮನೆ, ಓಪನ್ ಕಿಚನ್ . ಮನೆಯ ಮೊದಲ ಅಂತಸ್ತಿನಲ್ಲಿ ಒಂದು ರೂಂ ಇದೇ ಮನೆಯ ಸುತ್ತಲೂ ತೋಟಗಾರಿಕೆ ಬೆಳೆ ಇದೆ. ಸಭೆ ಸಮಾರಂಭ ಮಾಡಲು 20 ಗುಂಟೆ ಖಾಲಿ ಸ್ಧಳವೂ ಇದೆ. ಕೋಲಾರ ನಗರದಿಂದ ಒಂದೂವರೆ ಕಿಲೋ ಮೀಟರ್ ದೂರವಿರುವ ಕೋಗಿಲಹಳ್ಳಿ. ಸಿದ್ದರಾಮಯ್ಯ ಹೇಳಿದಂತೆ ರಾಷ್ಟ್ರೀಯ ಹೆದ್ದಾರಿ 75 ರ ಪಕ್ಕದ ಸರ್ವೀಸ್ ರಸ್ತೆಯಲ್ಲಿದೆ. ನಾಳೆ ಮನೆಯನ್ನು ಸಿದ್ದರಾಮಯ್ಯ ಅವರಿಗೆ ತೋರಿಸಲು ಕೈ ನಾಯಕರು ಸಿದ್ದತೆ ಮಾಡಿಕೊಂಡಿದ್ದಾರೆ. ಬಹುತೇಕ ಕೋಗಿಲಹಳ್ಳಿ ಬಳಿಯ ಮನೆಯನ್ನೆ ಫೈನಲ್ ಮಾಡುವ ಸಾಧ್ಯತೆ ಇದೆ.
ಇದನ್ನು ಓದಿ :- ಸಿದ್ದರಾಮಯ್ಯನ ಟೀಕೆ ಟಿಪ್ಪಣಿ ಗಳಿಗೆ ಕಿವಿಗೊಡುವ ಅಗತ್ಯವಿಲ್ಲ – ಸಿ.ಸಿ ಪಾಟೀಲ್