ಸಿದ್ದರಾಮಯ್ಯಗೆ ವಿರೋಧ ಪಕ್ಷದ ಸ್ಥಾನ ಸಿಕ್ಕಿದ್ದೇ ನಮ್ಮಿಂದ – ಬಿಸಿ ಪಾಟೀಲ್

ಹಿರೇಕೇರೂರು ಕ್ಷೇತ್ರದಲ್ಲಿ 461 ಕೋಟಿ ರೂಪಾಯಿ ಕಾಮಗಾರಿಗಳಿಗೆ ಚಾಲನೆ ಕೊಡ್ತಿದ್ದೇವೆ ಎಂದು ಹಾವೇರಿಯ ಹಿರೇಕೇರೂರಿನಲ್ಲಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.

ಹಿರೇಕೇರೂರು ಕ್ಷೇತ್ರದಲ್ಲಿ 461 ಕೋಟಿ ರೂಪಾಯಿ ಕಾಮಗಾರಿಗಳಿಗೆ ಚಾಲನೆ ಕೊಡ್ತಿದ್ದೇವೆ ಎಂದು ಹಾವೇರಿ (Haveri) ಯ ಹಿರೇಕೇರೂರಿನಲ್ಲಿ ಸಚಿವ ಬಿಸಿ ಪಾಟೀಲ್ (BC.Patil) ಹೇಳಿದ್ದಾರೆ. 38 ಕೋಟಿ ರೂಪಾಯಿ ಮಡ್ಲೂರು ಏತ ನೀರಾವರಿ ಯೋಜನೆ ಲೋಕಾರ್ಪಣೆ ಮಾಡ್ತಾ ಇದ್ದೇವೆ. ಸಿಎಂ ಬೊಮ್ಮಾಯಿ (Bommai) ಭಾಗಿಯಾಗ್ತಾ ಇದ್ದಾರೆ. 2018 ರಲ್ಲಿ ಚುನಾಯಿತರಾಗಿ ನಾನು ಹಿರೇಕೇರೂರು ತಾಲೂಕಿಗೆ 1000 ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ.

 

Bharatiya Janata Party - Wikipedia

ತಾಲೂಕಿಗೆ 6 ನೀರಾವರಿ ಯೋಜನೆ ತಂದಿದ್ದೇನೆ. ತಾಲೂಕಿನಲ್ಲಿ ಎಲ್ಲಾ ಕೆರೆಗಳು ಮಳೆಗಾಲದಲ್ಲಿ ತುಂಬುತ್ತವೆ. ನಮ್ಮ ತಾಲೂಕಿಗೆ ಬರಗಾಲ ಬರಲ್ಲ ಅದೊಂದು ತೃಪ್ತಿ ನನಗೆ ಇದೆ. ಮಾತು ಕೊಟ್ಟಂತೆ ಮಹಿಳೆಯರಿಗೆ ಗಾರ್ಮೆಂಟ್ಸ್ ಮಾಡ್ತೀವಿ ಅಂದಿದ್ದೆ ಅದನ್ನೂ ಮಾಡಿದ್ದೇನೆ. ನಾನು ಏನು ಮಾಡಿದ್ದೀನಿ ಅಂತ ಕಿರು ಹೊತ್ತಿಗೆ ಬಿಡುಗಡೆ ಮಾಡ್ತೀನಿ. ಏನೇನು ಕೆಲಸ ಆಗಿದೆ ಅಂತ ಮನೆ ಮನೆಗೆ ಕಿರು ಹೊತ್ತಿಗೆ ಬಿಡುಗಡೆ ಮಾಡ್ತೀವಿ. ಜನತೆಗೆ ಈ ಬಗ್ಗೆ ವರದಿ ಒಪ್ಪಿಸುವೆ ಎಂದು ಹೇಳಿದರು.

Former Hirekerur MLA U B Banakar all set to join Congress | udayavani

ಇದೇ ವೇಳೆ ಯು ಬಿ ಬಣಕಾರ್ (UB.Banakar) ದಮ್ಮು ತಾಕತ್ತಿನ ಬಗ್ಗೆ ಮಾತಾಡಿದ್ದಾರೆ. ಅವರ ದಮ್ಮು, ತಾಕತ್ತು ಮೂರು ಬಾರಿ ನೋಡಿ ಆಗಿದೆ, ಅವರ ದಮ್ಮು ಗೊತ್ತಾಗಿದೆ. ನನಗೆ ದಮ್ಮು ಇರೋದಕ್ಕೆ ಅವರಿಗೆ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ, ಒಂದು ಕಾರು, ರಾಜ್ಯ ಸಚಿವ ದರ್ಜೆ ಸ್ಥಾನ ಮಾನ ಬಂದಿತ್ತು. ದಮ್ಮು, ತಾಕತ್ ಮೇಲೆ ಚುನಾವಣೆ ನಡೆಯಲ್ಲ, ಅಭಿವೃದ್ಧಿ ಮೇಲೆ ಚುನಾವಣೆ ನಡೆಯುತ್ತದೆ . ಅವರು ಏನು ಕೆಲಸ ಮಾಡಿದ್ದಾರೆ ಅಂತ ಪುಸ್ತಕ ಬಿಡುಗಡೆ ಮಾಡಲಿ, ಆವಾಗ ಒಪ್ಪಿಕೊತೀನಿ. ಮೀರ್ ಸಾಧಿಕ್ ರಂಥ ಜನ ನಮ್ಮ ಸುತ್ತ ಮುತ್ತಲೇ ಇರ್ತಾರೆ. ಇದೇ ಬಣಕಾರ್ ನಮ್ ಜೊತೆಗೆ ಇದ್ದು ಈಗ ಕಾಂಗ್ರೆಸ್ ಸೇರಿದ್ದಾರೆ. ಅಂಥವರಿಂದ ರಕ್ಷಣೆ ಅಗತ್ಯ. ನಾವು ವ್ಯಭಿಚಾರ ಏನು ಮಾಡಿಲ್ಲ ಎಂದು ಯು.ಬಿ.ಬಣಕಾರ್ ಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನು ಓದಿ :-  ದಾಖಲೆಯ ಏರಿಕೆ ಕಂಡ ಚಿನ್ನದ ದರ- 57 ಸಾವಿರ ಗಡಿ ದಾಟಿದ ಹಳದಿ ಲೋಹ

ಇದೇ ವೇಳೆ ರಮೇಶ್ ಜಾರಕಿಹೊಳಿ (Ramesh jarakiholi) ಯವರದ್ದು ಅನವಶ್ಯಕ ಸಿಡಿ ಬಿಡುಗಡೆ ಮಾಡಿದ್ರು. ಆದರೆ ಏನಾಯ್ತು? ಬಿ ರಿಪೋರ್ಟ್ ಆಯ್ತು. ನಾವು ನಮ್ಮ ಗೌರವ ಕಾಯುವ ಕೆಲಸ ಮಾಡಲೇಬೇಕು. ಈಗ ಎಲ್ಲಾ ಎಲೆಕ್ಟ್ರಾನಿಕ್ ಮಾಧ್ಯಮದ ಕಾಲ, ಏನು ಬೇಕಾದರೂ ಮಾಡ್ತಾರೆ ಎಂದು ಹೇಳಿದರು.

ಜನತಾ ದಳದಲ್ಲಿ ಇದ್ದಿದ್ದರೆ ಕಾಲ ಕಸದಂತೆ ನೋಡ್ತಾ ಇದ್ರು ಅಂತ ಸಿದ್ದರಾಮಯ್ಯ (Siddaramaiah)  ಹೇಳಿದ್ರು. ಅವರಿಗೆ ವಿರೋಧ ಪಕ್ಷದ ಸ್ಥಾನ ಸಿಕ್ಕಿದ್ದೇ ನಮ್ಮಿಂದ. ಅವರು ನಮಗೆ ಅಭಿನಂದನೆ ತಿಳಿಸಬೇಕು. ಅವರು ಅಭಿನಂದನೆ ಆ ರೂಪದಲ್ಲಿ ಹೇಳ್ತಾರೆ ಅಷ್ಟೇ ಎಂದು ಬಿ.ಸಿ ಪಾಟೀಲ್ ಲೇವಡಿ ಮಾಡಿದ್ದಾರೆ.

ಇದನ್ನು ಓದಿ :- ರಾಜ್ಯದ 20 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಗೌರವ – ಎಡಿಜಿಪಿ ಸಿಐಡಿ ಕೆ ವಿ ಶರತ್ ಚಂದ್ರಗೆ ವಿಶಿಷ್ಟ ಸೇವಾ ಪದಕ

 

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!