ಕುಮಾರಸ್ವಾಮಿಯವರೇ (Kumaraswmay) ಮನ್ಸೂರ್ ಆಲಿಯವರನ್ನ (Mansoor ali) ದಯಮಾಡಿ ಬೆಂಬಲಿಸಿ. ನಾವು ನಿಮ್ಮನ್ನ ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದೀವಿ ಎಂದು ಶಾಸಕ ಎಚ್.ಕೆ.ಪಾಟೀಲ್ (HK. Patil) ಹೇಳಿದ್ದಾರೆ.
ಗದಗದಲ್ಲಿ ಮಾತನಾಡಿದ ಅವರು ದೇವೆಗೌಡ್ರನ್ ನ(Devegowda) ರಾಜ್ಯಸಭೆ ಸದಸ್ಯರನ್ನಾಗಿ ಮಾಡಿದ್ದೇವೆ. ಹೀಗಾಗಿ ಮನ್ಸೂರ್ ಆಲಿಖಾನ್ ಅವರನ್ನ ಬೆಂಬಲಿಸಿ. ಮುಂದೆ ಎಲ್ಲ ಕರೆದು ಕೊಡುತ್ತೇವೆ ಎಂದು ಹೇಳಿದರು.ಸಾರಸ್ವತ ಲೋಕ ಎದ್ದು ನಿಂತು ಬಡಿಗೆ ಹಿಡಿದಿದೆಪಠ್ಯಕ್ರಮ ವಿಚಾರದಲ್ಲಿ ಸಾಕಷ್ಟು ಗೊಂದಲ ಸೃಷ್ಟಿ ಮಾಡಿದ್ದಾರೆ. ಬಿಜೆಪಿ ನಾಯಕರು ರಾಜಕೀಯ ದುರುದ್ದೇಶಗಳನ್ನ ಈಡೇರಿಸಿಕೊಳ್ಳುವ ಸಲುವಾಗಿ ಏನುಬೇಕಾದರೂ ಮಾಡ್ತಾರೆ. ತಿರುಚಿದರೂ ನಡೆಯುತ್ತೆ ಅನ್ನೋದಕ್ಕೆ ನಮ್ಮ ಸಾರಸ್ವತ ಲೋಕ ಎದ್ದು ನಿಂತು ಬಡಿಗೆ ತೆಗೆದುಕೊಂಡಿದೆ. ಅದಕ್ಕಾಗಿ ಬಿಜೆಪಿಯವರಿಗೆ ಸ್ವಲ್ಪ ಬುದ್ಧಿ ಬಂದಿದೆ. ತಪ್ಪುಗಳು ಏನೋ ಒಂದು ಕಾರಣದಿಂದ ಆಗಿಲ್ಲ.
ಬಿಜೆಪಿ ದುರುದ್ದೇಶದಿಂದ ಬಸವಣ್ಣ (Basavanna) , ಅಂಬೇಡ್ಕರ್ (Ambedker), ಕುವೆಂಪು (Kuvempu) ಇಂತಹ ದೊಡ್ಡವರನ್ನು ತಿರುಚಿತ್ತೀರಿ. ಇನ್ನು ಸಣ್ಣ ಪುಟ್ಟ ಯಾವುದನ್ನ ಬಿಡುತ್ತೀರಿ. ನಮ್ಮ ದೇಶದಲ್ಲಿ ಏನು ನಡೆದಿದೆ ಅಂತ ಇತಿಹಾಸ ತಿರುಚಿತ್ತೀರಿ, ಲಿಟ್ರೇಚರ್ ಬದಲಾಯಿಸುತ್ತೀರಿ, ಇನ್ನಾವ ಉದಾಹರಣೆ ಬೇಕು. ಬಸವಣ್ಣ, ಅಂಬೇಡ್ಕರ್,ಬುದ್ಧ, ಕುವೆಂಪುರವರ ಇತಿಹಾಸಗಳನ್ನೇ ಪಠ್ಯಪುಸ್ತಕದಲ್ಲಿ ತಿರುಚುವ ಕೆಲಸಗಳಾದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯವರು ಇನ್ನೇನು ಬಿಡುತ್ತೀರಿ ಹೇಳಿ ನೀವು. ಟಿಪ್ಪುವಿನ ವಿಷಯದಲ್ಲಿ ಕೋಮುವಾದಿ ಬಣ್ಣ ಕೊಟ್ಟು ಪಾರಾಗಿ ಹೋಗ್ತಿದ್ರಿ. ಈಗ ಬಸವಣ್ಣನ ವಿಷಯದಲ್ಲಿ ಏನು ಹೇಳುತ್ತಿರಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ : – ಸಿಧು ಮೂಸೆವಾಲ ಹತ್ಯೆ ಪ್ರಕರಣ – ಗ್ಯಾಂಗ್ ಸ್ಟರ್ ಬಿಷ್ಣೋಯಿ ಮಾಸ್ಟರ್ ಮೈಂಡ್..!
ಸಿದ್ದರಾಮಯ್ಯ ಒಂಟಿ ಅನ್ನೋ ವಿಚಾರ
ಸಿದ್ದರಾಮಯ್ಯ(Siddaramaih) ಸ್ವತಂತ್ರ ಶೂರರು. ಒಂಟಿಯಾಗಿದ್ದರೆ ಒಂಟಿಯಾಗಿ ಇದೇನೆ ಅಂತಾನೂ ಹೇಳುತ್ತಾರೆ. ಸಿದ್ದರಾಮಯ್ಯ ನಮ್ಮ ಶಾಸಕಾಂಗ ಪಕ್ಷದ ನಾಯಕರು. ಅವರು ಒಂಟಿ ಅಲ್ಲ. ಕಾಂಗ್ರೆಸ್ ಪಕ್ಷ ಅವರ ಹಿಂದೆ ಸದಾಕಾಲ ಇದೆ. ಸಿದ್ಧರಾಮಯ್ಯರನ್ನ ಐದು ವರ್ಷ ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದೀವಿ. ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದ್ದೀವಿ. ಸಿದ್ದರಾಮಯ್ಯ ಒಂಟಿ ಅನ್ನೋ ಪ್ರಶ್ನೆ ಹಿಂದೆ ದುರುದ್ದೇಶ ಇದೆ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಇದನ್ನೂ ಓದಿ : – ಸಿದ್ದರಾಮಯ್ಯ ಎರಡು ತಲೆ ಹಾವು – ಏಕವಚನದಲ್ಲೇ ಶ್ರೀರಾಮುಲು ವಾಗ್ದಾಳಿ