ಸಿದ್ದರಾಮಯ್ಯ (Siddaramaiah) ಎರಡು ತಲೆ ಹಾವು ಎಂದು ಕೊಪ್ಪಳ (Koppala) ಜಿಲ್ಲೆ ಗಂಗಾವತಿ ತಾಲೂಕಿನ ಪಂಪಾ ಸರೋವರದಲ್ಲಿ ಸಾರಿಗೆ ಸಚಿವ ಶ್ರೀರಾಮುಲು (Sriramulu) ಹೇಳಿದ್ದಾರೆ. ಸಿದ್ದರಾಮಯ್ಯ ನಮ್ಮ ನಾಯಕರನ್ನು ನಾಯಿಗೆ ಹೋಲಿಸಿದ್ದಾರೋ ನಾವೆಲ್ಲ ಅವರನ್ನು ಎರಡು ತಲೆ ಹಾವು ಎಂದು ಕರೆಯಬೇಕಾಗತ್ತೆ.
ಯಾಕಂದ್ರೆ ಸಿದ್ದರಾಮಯ್ಯ ಅವರ ನಾಲಿಗೆ ಸೀಳು ನಾಲಿಗೆ ಎಂದು ಏಕವಚನದಲ್ಲಿ ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಬೆಳಿಗ್ಗೆ ಒಂದು ಮಾತಾಡ್ತಾನೆ,ಸಂಜೆ ಒಂದು ಮಾತಾಡ್ತಾನೆ. ಅವರ ಪಾರ್ಟಿಯಲ್ಲೇ ಅವರ ಮಾತಿಗೆ ಕಿಮ್ಮತ್ತು ಕೊಡ್ತಿಲ್ಲ. ಸೀಳು ನಾಲಿಗೆ ಇಟಕೊಂಡು ಸಿದ್ದರಾಮಯ್ಯ ಮೋದಿ (Modi) RSS ವಿರುದ್ದ ಮಾತಾಡ್ತೀದ್ದಾನೆ ಎಂದು ರಾಮುಲು ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಪಾರ್ಟಿಯಲ್ಲಿ ಚೆಸ್ ಆಟ ಆಡ್ತೀದ್ದಾನೆ. ಡಿಕೆಶಿ ಹೇಗೆ ಮುಗಿಸಬೇಕು ಎಂದು ಚೆಸ್ ಆಟ ಆಡ್ತೀದ್ದಾನೆ. ಅವನು ಮುಖ್ಯಮಂತ್ರಿ ಆಗೋ ಭ್ರಮೆಯಲ್ಲಿದ್ದಾನೆ ಸಿದ್ದರಾಮಯ್ಯ ಘನತೆಗೆ ತಕ್ಕಂತೆ ಮಾತಾಡಲಿ ಎಂದು ರಾಮುಲು ತಿರುಗೇಟು ನೀಡಿದ್ದಾರೆ. ದೇವೆಗೌಡರನ್ನ ಕುಮಾರಸ್ವಾಮಿ ಮುಗಿಸೀದ್ದಾನೆ. ಸಿದ್ದರಾಮಯ್ಯ ಭಸ್ಮಾಸುರ ಎಂದ ರಾಮುಲು, ಯಾರ ಮೇಲೆ ಕೈ ಇಟ್ರೆ ಅಲ್ಲಿ ಭಸ್ಮ ಆಗತ್ತೆ ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ. ಇದನ್ನೂ ಓದಿ : – ಸಿಧು ಮೂಸೆವಾಲ ಹತ್ಯೆ ಪ್ರಕರಣ – ಗ್ಯಾಂಗ್ ಸ್ಟರ್ ಬಿಷ್ಣೋಯಿ ಮಾಸ್ಟರ್ ಮೈಂಡ್..!