ಆರ್ ಎಸ್ ಎಸ್ (RSS ) ನಾಯಕರ ಬಗ್ಗೆ ಹೇಳಿಕೆ ಕೊಟ್ರೆ ಬಿಜೆಪಿ ನಾಯಕರು ಉತ್ತರ ನೀಡ್ತಾರೆ ಎಂಬ ಸಿದ್ದರಾಮಯ್ಯ ( SIDDARAMAIAH ) ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರ (RAMANAGARA ) ದಲ್ಲಿ ಸಚಿವ ಅಶ್ವಥ್ ನಾರಾಯಣ್ (Ashwath Narayan ) ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯ ನಿದ್ದೆರಾಮಯ್ಯ ಎಂಬ ಬಿರುದು ಪಡೆದವರು. ಸಿದ್ದರಾಮಯ್ಯ ರಾಜಕೀಯ ಬಿಟ್ಟು ಸನ್ಯಾಸತ್ವ ಸ್ವೀಕರಿಸಲಿ. ಸಿದ್ದರಾಮಯ್ಯ ಅವರು ಅಸಂಬದ್ದವಾಗಿ ಮಾತಾನಾಡ್ತಿದ್ದಾರೆ. ಸಿದ್ದರಾಮಯ್ಯ ಓಲೈಕೆ ರಾಜಕೀಯ ಮಾಡ್ತಿದ್ದಾರೆ. ನಾನು RSS ನಿಂದ ಬಂದವನೇ, ಬಿಜಿಪಿ ಪಕ್ಷದಲ್ಲಿ ಇದ್ದೇನೆ. RSSನಲ್ಲಿ ಎಲ್ಲಾ ಜಾತಿಯವರು ಕೆಲಸ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅವರ 5 ವರ್ಷದ ಆಡಳಿತ ನೋಡಿದ್ದೇವೆ. ಅವರ ವಾಚ್, ಶೂ, ಕನ್ನಡಕದ ಬಗ್ಗೆ ಅಕೌಂಟೆಬಿಲಿಟಿ ಇದ್ಯಾ..? 5 ವರ್ಷ ನಿದ್ದೆ ಮಾಡಿ ನಿದ್ದರಾಮಯ್ಯ ಆಗಿದ್ದಾರೆ. ಸಿದ್ದರಾಮಯ್ಯ ಆಡಳಿತದಲ್ಲಿ ಎಷ್ಟು ಅಕ್ರಮಗಳು ನಡೆದಿದೆ. ಇದನ್ನೂ ಓದಿ : – ರಾಜ್ಯಸಭೆಗೆ ಬಿಜೆಪಿಯಿಂದ ಮೂವರು ಸದಸ್ಯರನ್ನ ಕಳಿಸ್ತೇವೆ – ಯಡಿಯೂರಪ್ಪ ಭರವಸೆ
ಮರಳು ದಂಧೆ, ಅರ್ಕಾವತಿ ಬಡಾವಣೆ, ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಸೇರಿದಂತೆ ಎಲ್ಲಾ ಕಡೆ ಹಗರಣಗಳೇ ಇವೆ. ಕಡು ಬಡತನದಿಂದ ಬಂದ ಅವರು ಪ್ರಾಮಾಣಿಕ, ದಕ್ಷತೆ ಬಿಟ್ಟು ಭ್ರಷ್ಟಾಚಾರದ ಕೂಪವನ್ನೇ ಮಾಡಿದ್ದಾರೆ. ಸಿಎಂ ಆಗಿ ಅಧಿಕಾರ ಅನುಭವಿಸಿ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದಿದ್ರು. ಸಿದ್ದರಾಮಯ್ಯ ರಾಜಕೀಯ ರುಚಿ ನೋಡಿದ್ದಾರೆ. ಸಿದ್ದರಾಮಯ್ಯ ರಾಜಕೀಯ ಬಿಟ್ಟು ಸನ್ಯಾಸತ್ವ ಸ್ವೀಕರಸಬೇಕು ಎಂದು ಸಿದ್ದರಾಮಯ್ಯ ವಿರುದ್ದ ಅಶ್ವಥ್ ನಾರಾಯಣ್ ಕಿಡಿಕಾರಿದ್ರು.
ಇದನ್ನೂ ಓದಿ : – ರಾಜ್ಯಸಭೆಯಲ್ಲಿ ರಾಜ್ಯದ ಜನ ಮೆಚ್ಚುವ ರೀತಿ ಕೆಲಸ ಮಾಡುತ್ತೇನೆ – ನಟ ಜಗ್ಗೇಶ್