ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲ್ಲ – ಬಿ.ಎಸ್ ಯಡಿಯೂರಪ್ಪ ಹೊಸ ಬಾಂಬ್

ಬೆಳಗಾವಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ. ಯಾವ ಕಾರಣಕ್ಕೂ ಕೋಲಾರದಿಂದ ಸಿದ್ದರಾಮಯ್ಯ ನಿಲ್ಲುವುದಿಲ್ಲ.

ಬೆಳಗಾವಿ(BELAGVI)ಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ (YEDIURAPPA)ಮಾತನಾಡಿ. ಯಾವ ಕಾರಣಕ್ಕೂ ಕೋಲಾರ(KOLARA) ದಿಂದ ಸಿದ್ದರಾಮಯ್ಯ ನಿಲ್ಲುವುದಿಲ್ಲ. ನಾನು ಭವಿಷ್ಯ ಹೇಳುತ್ತಿಲ್ಲ ಅವರು ಕೋಲಾರದಿಂದ ನಿಲ್ಲುವುದಿಲ್ಲ. ಅವರು ಡ್ರಾಮಾ ಮಾಡುತ್ತಿದ್ದಾರೆ. ಮೈಸೂರಿಗೆ ಬರೋಕೆ ಪ್ರಯತ್ನ ಮಾಡುತ್ತಿದ್ದಾರೆ. ಕೋಲಾರದಲ್ಲಿ ನಿಂತುಕೊಂಡ್ರೇ ಅವರು ಮನೆಗೆ ಹೋಗುವುದು ನಿಶ್ಚಿತ ಎಂದು ಅವರಿಗೆ ಗೊತ್ತಿದೆ. ಆದ್ರೂ ಸುಮ್ಮನೆ ರಾಜಕೀಯ ಡೊಂಬರಾಟ ಮಾಡುತ್ತಿದ್ದಾರೆ. ನನ್ನ ಪ್ರಕಾರ ಅವರು ಕೋಲಾರದಲ್ಲಿ ನಿಲ್ಲುವುದಿಲ್ಲ ಮೈಸೂರಿಗೆ ಹೋಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಿದ್ದರಾಮಯ್ಯ 2 ಕಡೆಯಾದ್ರೂ ಸ್ಪರ್ಧೆ ಮಾಡಲಿ 3 ಕಡೆಯಾದ್ರೂ ಮಾಡಲಿ ಮನೆಗೆ ಹೋಗುವುದು ನಿಶ್ಚಿತ ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ರು.

ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವಿಚಾರ

ಅವರು ಮಾಡಿರುವ ಭ್ರಷ್ಟಾಚಾರದ ಬಗ್ಗೆ ರಾಜ್ಯದ ಉದ್ದಗಲಕ್ಕೂ ಹೇಳಿದ್ರೂ ಸಾಲಲ್ಲ. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್. ಅವರ ಅಧಿಕಾರದ ಅವಧಿಯಲ್ಲಿ ಯಾವ ರೀತಿ ಲೂಟಿ ಮಾಡಿ ಹಗಲು ದರೋಡೆ ಮಾಡಿದ್ದಾರೆ ಎಲ್ಲವೂ ಗೊತ್ತಿದೆ. ಅದಕ್ಕಾಗಿ ಜನ ಅವರನ್ನ ನಿರ್ಲಕ್ಷ್ಯ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸಿದ್ದರಾಮಯ್ಯ, (SIDDARAMAIAH)ಶಿವಕುಮಾರ್ ಸ್ವಲ್ಪ ಉಸಿರಾಡುತ್ತಿದ್ದಾರೆ. ಚುನಾವಣೆ ಆದ ಮೇಲೆ ಆ ಉಸಿರು ನಿಲ್ಲುತ್ತೆ. ಇದನ್ನು ಓದಿ :- ನಾಳೆಯಿಂದ ಸಾರಿಗೆ ನೌಕರರ ಬೃಹತ್ ಧರಣಿ ಸತ್ಯಾಗ್ರಹ, ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ

ಬಿಜೆಪಿಯಲ್ಲಿ ಮಾಸ್ ಲೀಡರ್ ಇಲ್ಲ ಅಂತಾ ಸಿದ್ದರಾಮಯ್ಯ ಹೇಳಿಕೆ ವಿಚಾರ

ಅವರ ಪಾರ್ಟಿಯಲ್ಲಿ ಯಾರು ಮಾಸ್ ಲೀಡರ್ ಇದ್ದಾರೆ‌. ನಮಗಾದ್ರೂ ಪ್ರಧಾನಿ ನರೇಂದ್ರ ಮೋದಿ (NARENDRA MODI) ಅಂತಾ ಒಬ್ಬ ಮಹಾನ್ ನಾಯಕ ಇದ್ದಾರೆ. ಅವರು ರಾಹುಲ್ ಗಾಂಧಿ ಹಿಡಿದುಕೊಂಡು ಓಡಾಡುತ್ತಾರಾ? ಅವರಿಗೆ ಯಾರಿದ್ದಾರೆ ರಾಷ್ಟ್ರ ಮಟ್ಟದಲ್ಲಿ. ಮತ್ತೆ ಯಾಕೆ ಎಲ್ಲಾ ರಾಜ್ಯಗಳನ್ನ ಕಳೆದುಕೊಳ್ತಿದ್ದಾರೆ. ಈ ರೀತಿ ಹೇಳಿಕೆಗಳಿಂದ ಅವರು ಎನು ಸಾಧನೆ ಮಾಡಲು ಆಗಲ್ಲ ಎಂದು ಹೇಳಿದ್ರು.

BJP forms five-member team for 2024 Lok Sabha elections

ನೂರಕ್ಕೆ ನೂರು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ

ನೂರಕ್ಕೆ ನೂರು 140ಕ್ಕೂ ಹೆಚ್ಚು ಸೀಟ್ ಗೆದ್ದು ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. 2-3 ದಿನದಲ್ಲಿ ನಾನು ಪ್ರವಾಸ ಮಾಡುತ್ತೇನೆ. ಆಗ ನಿಮಗೆ ಅರ್ಥವಾಗುತ್ತೆ ಬಿಜೆಪಿ(BJP)ಗೆ ಜನರ ಬೆಂಬಲ ಎಷ್ಟಿದೆ ಎಂದು ಗೊತ್ತಾಗಲಿದೆ . ಅಧಿಕಾರಕ್ಕೆ ತರುವವರೆಗೂ ಮನೆಯಲ್ಲಿ ಕುಳಿಕೊಳ್ಳುವ ಪ್ರಶ್ನೆ ಇಲ್ಲ. ನನಗೆ ಯಾರು ಕರೆಯುತ್ತಾರೆ, ಯಾರು ಬಿಡ್ತಾರೆ ಅನ್ನೋದು ನನಗೆ ಯೋಚನೆ ಇಲ್ಲ.ನಿಶ್ಚಿತವಾಗಿ ರಾಜ್ಯದಲ್ಲಿ ಎಲ್ಲ ಕಡೆ ಹೋಗುತ್ತೇನೆ. ರಾಷ್ಟ್ರ ಮಟ್ಟದಲ್ಲಿ ಪ್ರಧಾನಿಯವರು ಇಷ್ಟೊಂದು ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ‌. ಅದನ್ನ ನಿರ್ವಹಿಸಿ ನಾನು ಪ್ರಧಾನಿಯವರಿಗೆ ಕೊಟ್ಟ ಭರವಸೆ ಈಡೇರಿಸುತ್ತೇನೆ ಎಂದು ತಿಳಿಸಿದ್ರು.

ಇದನ್ನು ಓದಿ :- ಸುರ್ಜೇವಾಲಾ ಅವರೇ ಹೊಸ ಬಾಟಲಿಗೆ ಹಳೆಯ ಮದ್ಯ ತುಂಬುವ ವ್ಯರ್ಥದ ಕೆಲಸ ಏಕೆ? ಹೆಚ್ಡಿಕೆ ಪ್ರಶ್ನೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!