ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಜೀವ ಕುಟು ಕುಟು ಅಂತಿದೆ. ಯಾವಾಗ ಇದು ಸಾಯುತ್ತೋ ಗೊತ್ತಿಲ್ಲ. ನಿರ್ನಾಮ ಮಾಡಲು ಸಿದ್ದರಾಮಯ್ಯನಂತವರು ಒಬ್ಬರು ಸಾಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯಮಾಡಿದ್ದಾರೆ.
ಸಿದ್ದರಾಮಯ್ಯ ಕೋರ್ಟ್ ಗೆ ಗೌರವ ಕೊಡೋದನ್ನು ಮೊದಲು ಕಲಿತುಕೊಳ್ಳಲಿ. ಸಾಧು ಸಂತರ ಬಗ್ಗೆ ನೀವು ಮಾಡಿರೋ ಹೇಳಿಕೆ, ಅಕ್ಷ್ಯಮ್ಯ ಅಪರಾಧ. ಜರಾಸಂಧನಿಗೆ ನೂರು ತಪ್ಪು ಮಾಡಿದಾಗ ಶಿಕ್ಷೆ ಆಯ್ತು ಅಂತಾರಲ್ಲ ಹಾಗೆ, ಸಿದ್ದರಾಮಯ್ಯ ಇವರದ್ದೂ ನೂರು ತಪ್ಪಾಯ್ತು.
ಇದನ್ನು ಓದಿ :- ಸಿದ್ದರಾಮಯ್ಯ ಬಗ್ಗೆ ಮಾತಾಡುವ ಅಗತ್ಯವಿಲ್ಲ – ಹೆಚ್.ಡಿ ಕುಮಾರಸ್ವಾಮಿ
ವೀರಶೈವ ಲಿಂಗಾಯತ ಒಡೆದಾಯ್ತು, ಈಗ ಸ್ವಾಮೀಜಿಗಳಲ್ಲಿ ಹಿರಿಯ ಸ್ವಾಮೀಜಿಗಳು, ಕಿರಿಯ ಸ್ವಾಮೀಜಿಗಳು ಎಂದು ಒಡೆಯುವ ಪ್ರಯತ್ನವನ್ನು ಸಿದ್ದರಾಮಯ್ಯ ನಡೆಸುತ್ತಿದ್ದಾರೆ. ಹಿರಿಯ ಸ್ವಾಮಿಜಿಗಳು ಅಂದ್ರೆ ಏನ್ ಲೆಕ್ಕ ಅವರದ್ದು, ಮಾನದಂಡ ಏನು. ದಪ್ಪ ಇದ್ದಾರೋ ಎತ್ತರ ಇದ್ದಾರೋ, ಹಣದಲ್ಲಿ ಜಾಸ್ತಿ ಇದ್ದಾರೋ. ಯಾಕಂದ್ರೆ ಸಿದ್ದರಾಮಯ್ಯ ಮೆದುಳೊಂದು ತೆಳ್ಳಗಿದೆ,
ಅದನ್ನ ಬಿಟ್ರೆ ಅವರು ಹಿರಿಯರು ಅನ್ನೋ ಪ್ರಶ್ನೆ ಉದ್ಭವವಾಗಲ್ಲ ಎಂದು ಲೇವಡಿ ಮಾಡಿದರು. ಯಾರು ಸರ್ವವನ್ನೂ ತ್ಯಾಗ ಮಾಡಿ ಬಂದಿರ್ತಾರೋ ಅವರನ್ನು ಸ್ವಾಮೀಜಿಗಳು ಎಂದು ನಮ್ಮ ಸಮಾಜದಲ್ಲಿ ಕರೆಯುತ್ತೇವೆ. ಸಿದ್ದರಾಮಯ್ಯ ಅವರದ್ದು, ಈ ಸಾಧು ಸಂತರನ್ನು ಒಡೆಯೋ ಪ್ರಯತ್ನವಾಗಿದೆ. ಹಿರಿಯ ಸ್ವಾಮೀಜಿಗಳು ವಿರೋಧ ಮಾಡಿಲ್ಲ ಅಂತಾರೆ, ಹಾಗಾದರೆ ಇವರ ಹೇಳಿಕೆಯನ್ನ ಸ್ವಾಗತ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.
ಇದನ್ನು ಓದಿ :- ಸಿದ್ದರಾಮಯ್ಯ ಪರಿಸ್ಥಿತಿ ತುಘಲಕ್ ರೀತಿ ಆಗಿದೆ – ಶ್ರೀರಾಮುಲು