ಎಸಿಬಿ( ACB) ಯನ್ನ ಲೋಕಾಯುಕ್ತದಲ್ಲಿ ವಿಲೀನಗೊಳಿಸಿದ ಕುರಿತಂತೆ ಹೈಕೋರ್ಟ್ ( HIGH COURT ) ತೀರ್ಮಾನವನ್ನು ಗೌರವಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ( SIDDARAMAIAH ) ಪ್ರತಿಕ್ರಿಯಿಸಿದ್ದಾರೆ.
ಏನು ತೀರ್ಮಾನ ಮಾಡಿದ್ದಾರೆ ಗೊತ್ತಿಲ್ಲ. ನಾನು ಯಾವುದೇ ಆದೇಶ ನೋಡಿಲ್ಲ. ಎಸಿಬಿಯಲ್ಲಿದ್ದ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾಯಿಸಬೇಕು ಎಂದು ಆದೇಶ ಬಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ : – BREAKING NEWS -ಲೋಕಾಯುಕ್ತ ವ್ಯಾಪ್ತಿಗೆ ಎಸಿಬಿ – ಹೈಕೋರ್ಟ್ ಮಹತ್ವದ ಆದೇಶ
ಈದ್ಗಾ ಮೈದಾನ ( EDIGA GROUND ) ದ ಬಗ್ಗೆ ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಷಯದ ಬಗ್ಗೆ ಮಾತಾನಾಡಬಾರದು. ಹಿಂದು ಮುಸ್ಲಿಮರಿಗೆ ದ್ವೇಷ ತರುವ ಕೆಲಸ ಮಾಡಬಾರದು ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.
ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಇರಬೇಕು. ಬಿಜೆಪಿ ವಿವಾದಗಳನ್ನು ಹುಟ್ಟುಹಾಕುತ್ತಿದೆ. ಬಿಜೆಪಿಯವರ ಕೆಲಸವೇ ಇದೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಸುಧಾಕರ್ ಕಥೆ ಹೇಳಬೇಕಾಗುತ್ತದೆ..
ಸಚಿವ ಸುಧಾಕರ್ ಬಗ್ಗೆಯೂ ಇದೇ ವೇಳೆ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಸುಧಾಕರ್ ಮೊದಲು ಎಲ್ಲಿದ್ದವನು .? ಅವನಿಗೆ ಟಿಕೆಟ್ ಕೊಡ್ಸಿದ್ದು ಯಾರು ಗೊತ್ತಾ ? ನಾನೇ ಟಿಕೆಟ್ ಕೊಡ್ಸಿ ಎಂಎಲ್ ಎ ಮಾಡಿಸಿದ್ದು. ಅವನಿಗೆ ಬಾಯಿ ಮುಚ್ಚಿಕೊಂಡು ಸುಮ್ಮನೇ ಇರೋದಕ್ಕೆ ಹೇಳಿ. ನಾನೇ ಟಿಕೆಟ್ ಕೊಡ್ಸಿ ತಪ್ಪು ಮಾಡಿಬಿಟ್ಟಿದ್ದೇನೆ. ಇಲ್ಲ ಅಂದ್ರೆ ಸುಧಾಕರ್ ಕಥೆ ಹೇಳಬೇಕಾಗುತ್ತದೆ ಎಂದು ಗೌರಿಬಿದನೂರಿನ ವಿಧುರಾಶ್ವತ್ಥದಲ್ಲಿ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.
ಇದನ್ನೂ ಓದಿ : – ಆಗಸ್ಟ್ 15ರಂದು ವೊಲ್ವೊ ಸೇರಿ ಎಲ್ಲಾ ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ