ಪಿಎಸ್ಐ ಹಗರಣದಲ್ಲಿ ಸಚಿವ ಅಶ್ವಥ್ ನಾರಾಯಣ್ (Ashwath narayan) ಭಾಗಿ ಅಂತ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಸಚಿವ ಅಶ್ವತ್ಥ್ ನಾರಾಯಣ್ ಕೆಂಡಾಮಂಡಲರಾಗಿದ್ದಾರೆ.
ಲೋಕಾಯುಕ್ತದ ಕೈ ಕಟ್ಟಿ ನೀರಿಗೆ ಬಿಟ್ಟ “ಅರ್ಕಾವತಿ ಹಗರಣದ ಪಿತಾಮಹ” ಸಿದ್ದರಾಮಯ್ಯ ಅವರ ಸುಳ್ಳುಗಳ ಸರಮಾಲೆಯನ್ನು ಕೇಳಿ, ಡಿಕೆ ಶಿವಕುಮಾರ್ (DK.Shivkumar) ಅವರು ಅಹುದಹುದೆನ್ನಬಹುದೇ ವಿನಃ ನಾಡಿನ ಜನರು ನಂಬಲಾರರು. DySP ಗಣಪತಿ (DYSP Ganapathi) ಅವರ ಆತ್ಮಹತ್ಯೆಗೆ ಕಾರಣವೇನೆಂದು ಕೇಳಿದರೆ ಕಳ್ಳರಂತೆ ನುಣುಚಿಕೊಳ್ಳುವುದೇಕೆ ಸಿದ್ದರಾಮಯ್ಯ ಅವರೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ : – ಸರ್ಕಾರದಿಂದ ಸರ್ಕಾರಿ ಶಾಲೆಗಳ ನಿರ್ಲಕ್ಷ್ಯ – “ಸೇವ್ ಸ್ಕೂಲ್” ಹ್ಯಾಶ್ ಟ್ಯಾಗ್ ಬಳಸಿ ಸಿದ್ದರಾಮಯ್ಯ ಆಕ್ರೋಶ
ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯ CEO ಆಗಲು ಪೈಪೋಟಿ ನಡೆಸುತ್ತಿರುವ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ “ದಿನಕ್ಕೊಂದು ಸುಳ್ಳು” ಎಂಬ ತತ್ತ್ವಕ್ಕೆ ಮೊರೆ ಹೋಗಿದ್ದಾರೆ. ತಾವು ಬೆಳೆಸಿದ ಭ್ರಷ್ಟರನ್ನು ಬಿಜೆಪಿ ಸರ್ಕಾರ ಮಟ್ಟ ಹಾಕುತ್ತಿದೆ ಎಂಬ ಭಯ ಅವರಲ್ಲಿ ಅಸ್ಥಿರತೆ ಉಂಟುಮಾಡಿದೆ ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ವಿರುದ್ದ ಅಶ್ವಥ್ ನಾರಾಯಣ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ : – ‘ಡೋಲೋ 650’ ಗೆ ಚಳಿ ಜ್ವರ ! -ಬೆಂಗಳೂರಿನ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ದಾಳಿ