ಬಿಜೆಪಿ ಸಂಘಟನೆ ಬಲಗೊಳಿಸುವ ದೃಷ್ಟಿಯಿಂದ ಚುನಾವಣಾ ಸಭೆ ನಡೆದಿದೆ . ಹಳೆ ಮೈಸೂರು ಭಾಗದ ನಾಯಕರ ಜೊತೆ ಸಮಾವೇಶ ನಡೆದಿದೆ ಎಂದು ಬಿಜಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ . ರವಿ (CT.Ravi) ಹೇಳಿದ್ದಾರೆ.
ಜನೋತ್ಸವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಸಮಾವೇಶದ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಹೇಳಿದರು.
ಇದೇ ವೇಳೆ ಸಿದ್ದರಾಮಯ್ಯ (Siddramaiah) ನವರ ಮಾನಸಿಕತೆ ದೇಶವಿರೋಧಿಗಳ ಮನಸ್ಥಿತಿಗೆ ಪ್ರಚೋದನೆ ಕೊಡುವಂಥದ್ದು. ಮುಸ್ಲಿಂ ಏರಿಯಾದಲ್ಲಿ ಜಿನ್ನಾ ಫೋಟೋ ಹಾಕಬೇಕಾ ? ನಾಲ್ವಡಿ ಕೃಷ್ಣರಾಜ ಒಡೆಯರ್ ಫೋಟೋ ಹಾಕಬಾರದಾ ಎಂದು ಪ್ರಶ್ನಿಸಿದ್ರು. ಮುಸ್ಲಿಂ ಏರಿಯಾ ಅಂದ್ರೆ ಏನು ಪಾಕಿಸ್ತಾನಾನಾ . ಮುಸಲ್ಮಾನರು ಬೇರೆ ಏರಿಯಾಗೆ ಕಾಲಿಡೋಕೆ ಬಿಡಬಾರದು ಅಂದ್ರೆ ಆಗುತ್ತಾ ?. ಸಿದ್ದರಾಮಯ್ಯ ಈ ಮೂಲಕ ಪ್ರಚೋದನೆ ಕೊಟ್ಟಿದ್ದಾರೆ. ಇದನ್ನೂ ಓದಿ : – BREAKING – ಕೇಂದ್ರಿಯ ಚುನಾವಣಾ ಸಮಿತಿಯಲ್ಲಿ BSY ಗೆ ಸ್ಥಾನ ನೀಡಿದ ಹೈಕಮಾಂಡ್
ಮುಸಲ್ಮಾನರು ಬೇರೆ ಹಿಂದೂಗಳೆ ಬೇರೆ ಅನ್ನೋ ಮಾನಸಿಕತೆ ನಿರ್ಮಾಣ ಮಾಡ್ತಿದ್ದಾರೆ. ಈ ಮಾನಸಿಕತೆಯಿಂದಲೇ ಗಾಂಧಾರ,ಬಲೂಚಿಸ್ತಾನ ಆಗಿದ್ದು. ಬಂಗಾಳ ಬಾಂಗ್ಲಾದೇಶ ಆಗಿದ್ದು. ಈ ರೀತಿ ಹೇಳಿಕೆ ನೀಡಿದರೆ ದೇಶದ ಸಂವಿಧಾನಕ್ಕೆ ಏನು ಬೆಲೆ ಇದೆ. ಇಂತಹ ಹೇಳಿಕೆಗಳು ಅಪಾಯಕಾರಿ ಕೂಡ ಹೌದು. ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಸಿಟಿ ರವಿ ತಿಳಿಸಿದ್ದಾರೆ.
ಇದನ್ನೂ ಓದಿ : – ತೀರ್ಥಹಳ್ಳಿಯಲ್ಲಿ ನಡೆದ ಎಲ್ಲ ಕೋಮು ಗಲಭೆಗಳ ಹಿಂದೆ ಆರಗ ಜ್ಞಾನೇಂದ್ರ ಇದ್ದಾರೆ – ಕಿಮ್ಮನೆ ರತ್ನಾಕರ್