ಸಿದ್ದರಾಮೋತ್ಸವ ( siddaramosthava ) ಒಂದು ರಾಜಕೀಯ ಉತ್ಸವ. ತಮ್ಮ ಹುಟ್ಟಿದ ದಿನಾಂಕ ನೆನಪಿಲ್ಲ ಅಂತ ಸಿದ್ದರಾಮಯ್ಯ ಸದನದಲ್ಲೇ ಹೇಳಿದ್ರು. ಅವರಿಗೆ ಯಾವಾಗ 75 ಅಯ್ತು ಅಂತ ರಾಜ್ಯದ ಜನತೆಗೆ ಗೊತ್ತಾಗ್ತಿದೆ ಎಂದು ಕಾಂಗ್ರೆಸ್ ನ ಸಿದ್ದರಾಮೋತ್ಸವಕ್ಕೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ (Shankar Patil Munenakoppa) ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಬಿಜೆಪಿ ಯಿಂದಲೂ ಅವರಿಗೆ ಹುಟ್ಟಿದ ಹಬ್ಬದ ಶುಭಾಶಯ ಕೋರುತ್ತೇವೆ. ಆದ್ರೆ ಸಿದ್ದರಾಮೋತ್ಸವದಿಂದ ಅವರು ಸರ್ಕಾರ ರಚನೆ ಮಾಡಕ್ಕಾಗಲ್ಲ ಅಂತ ರಾಜ್ಯದ ಜನತೆ ಅವರಿಗೆ ತೋರಿಸ್ತಾರೆ. ಸಿದ್ದರಾಮೋತ್ಸವದಿಂದ ನಡುಗುವ ಪಕ್ಷ ಬಿಜೆಪಿ ಅಲ್ಲ. ಅತೀ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷ ಬಿಜೆಪಿ. ಅನೇಕ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇದೆ. ರಾಜ್ಯದಲ್ಲಿ ಅಧಿಕಾರ ಹಿಡಿಯುವ ಕಸರತ್ತು ಮಾಡ್ತಿದೆ ಕಾಂಗ್ರೆಸ್. ಅದಕ್ಕೆ ರಾಜ್ಯದ ಜನ ಅವಕಾಶ ಕೊಡಲ್ಲ. ಸಿದ್ದರಾಮೋತ್ಸವ ( siddaramosthava ) ಚುನಾವಣೆ ದಿಕ್ಸೂಚಿ ಅಂತ ಅವ್ರು ಹೇಳ್ಕೋತಾರೆ. ಆದ್ರೆ ಇದನ್ನು ರಾಜ್ಯದ ಜನ ನಂಬುವುದಿಲ್ಲ ಎಂದು ತಿಳಿಸಿದ್ರು. ಹರ್ ಘರ್ ತಿರಂಗಾ ಅಭಿಯಾನಕ್ಕೆ ದೋಷಪೂರಿತ ಧ್ವಜಗಳ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೆಲವು ಕಡೆ ದೋಷಪೂರಿತ ಧ್ವಜಗಳು ಬರ್ತಿವೆ. ದೋಷಪೂರಿತ ರಾಷ್ಟ್ರಧ್ವಜಗಳನ್ನು ಹಾರಿಸಬಾರದು ಅಂತ ನಾನು ಜನರಲ್ಲಿ ವಿನಂತಿ ಮಾಡ್ಕೋತೇನೆ ಎಂದು ಹೇಳಿದ್ರು. ಇದನ್ನು ಓದಿ : – ಅಂಕಮನಾಳ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಅಸ್ವಸ್ಥ ಪ್ರಕರಣ – 84 ಕ್ಕೇರಿದ ವಾಂತಿ ಭೇದಿ ಪ್ರಕರಣ ಸಂಖ್ಯೆ
ರಾಜ್ಯಾಧ್ಯಕ್ಷ ಬದಲಾವಣೆ ವಿಚಾರ
ಇದರ ಬಗ್ಗೆ ನಮ್ಮ ಪಕ್ಷದ ಹಿರಿಯ ನಾಯಕರು ಚರ್ಚೆ ಮಾಡ್ತಾರೆ. ನಾನು ಮಂತ್ರಿಯಾಗಿ ಅದರ ಬಗ್ಗೆ ಮಾತಾಡೋಕ್ಕೆ ಆಗಲ್ಲ. ಸಂಪುಟ ಪುನಾರಚನೆ ಸಿಎಂ ಪರಮಾಧಿಕಾರ. ಅವರು ಯಾವಾಗ ಬೇಕಾದೂ ವಿಸ್ತರಣೆ ಮಾಡಬಹುದು. ಅವಕಾಶ ಸಿಕ್ಕಿ ಹೊಸಬರು ಬಂದ್ರೆ ಒಳ್ಳೆ ಕೆಲಸ ಮಾಡ್ತಾರೆ ಎಂದು ತಿಳಿಸಿದ್ರು.
ಇದನ್ನು ಓದಿ : – ಹುಬ್ಬಳ್ಳಿ-ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ಕಾರು ಅಪಘಾತ – ಒಂದೇ ಕುಟುಂಬದ ಮೂವರ ಸಾವು ಓರ್ವ ಮಹಿಳೆಗೆ ಗಂಭೀರ ಗಾಯ