ಪಂಜಾಬಿ ಗಾಯಕ ಸಿಧು (SIDHU MOOSEWALA) ಹತ್ಯೆ ಬೆನ್ನಲ್ಲೇ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಗೆ ಭದ್ರತೆ ಹೆಚ್ಚಿಸಲಾಗಿದೆ.
ಗಾಯಕ ಸಿಧು ಹತ್ಯೆಗೆ ಕಾರಣರಾದವರು ಸಲ್ಮಾನ್ ಖಾನ್ (SALMAN KAHAN) ಹತ್ಯೆ ಮಾಡಲು ಯತ್ನಿಸಬಹುದು ಎನ್ನಲಾಗಿದೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯಾದ ಕೆಲವೇ ಗಂಟೆಗಳಲ್ಲೇ ಅದರ ಹಿಂದೆ ಯಾರಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳಿಗೆ ಸುಳಿವು ಸಿಕ್ಕಿದೆ. ಮೂಸೆವಾಲಾ ಹತ್ಯೆ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕಾರಣ ಎನ್ನಲಾಗುತ್ತಿದೆ. ಲಾರೆನ್ಸ್ ಬಿಷ್ಣೋಯ್ (LAWRENCE BISHNOY) ತಿಹಾರ್ ಜೈಲಿನಲ್ಲಿದ್ದುಕೊಂಡೇ ಸಿಧುವನ್ನ ಕೊಲ್ಲಿಸಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ : – ಕಾಂಗ್ರೆಸ್ ನಾಯಕ, ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ಗೆ ಗುಡ್ ಬೈ
ಸಲ್ಮಾನ್ ಖಾನ್ ಈ ಹಿಂದೆ ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಕೃಷ್ಣಮೃಗವನ್ನು ಪವಿತ್ರಜೀವಿ ಎಂದು ಪರಿಗಣಿಸಿರುವ ಬಿಷ್ಣೋಯ್ ಸಮುದಾಯಕ್ಕೆ ಲಾರೆನ್ಸ್ ಸೇರಿದ್ದಾನೆ. ಹೀಗಾಗಿ ಜೋಧ್ ಪುರ ನ್ಯಾಯಾಲಯದ ಹೊರಗೆ ಲಾರೆನ್ಸ್ ಸಲ್ಮಾನ್ ಖಾನ್ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಹೀಗಾಗಿ ಸಲ್ಮಾನ್ ಖಾನ್ ಗೆ ಹೆಚ್ಚಿನ ಭದ್ರತೆ ನೀಡಲು ನಿರ್ಧರಿಸಿದೆ ಎನ್ನಲಾಗಿದೆ. ಇದನ್ನೂ ಓದಿ : –ನ್ಯಾಷನಲ್ ಹೆರಾಲ್ಡ್ ಪ್ರಕರಣ – ಸೋನಿಯಾ ರಾಹುಲ್ ಗಾಂಧಿಗೆ ED ನೊಟೀಸ್