ಇಶಾ ಫೌಂಡೇಶನ್ (Isha foundation) ವತಿಯಿಂದ ಬೆಂಗಳೂರಿನ ಅರಮನೆ ಮೈದಾನದ (palace ground) ತ್ರಿಪುರ ವಾಸಿನಿಯಲ್ಲಿ (Tripura vasini)`ಮಣ್ಣು (Soil) ಉಳಿಸಿ ಅಭಿಯಾನ’ದ ಬೃಹತ್ ಸಮಾರಂಭ ಆಯೋಜಿಸಲಾಗಿದೆ.
ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ (BS.yediyurappa) ಅವರು, ಈ ಶತಮಾನದಲ್ಲಿ ನಾವು ಕಳವಳಕಾರಿ ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ. ಪ್ರಪಂಚದಾದ್ಯಂತ ಪ್ರವಾಹ, ಅತಿವೃಷ್ಟಿ, ಪರಿಸರ ಅಸಮತೋಲನ ಹೆಚ್ಚಾಗ್ತಿದೆ. ನಾಗರಿಕತೆ ಹೆಚ್ಚಾಗ್ತಿದೆ. ಉಸಿರಾಟಕ್ಕೆ ಶುದ್ಧ ಗಾಳಿ, ನೀರೂ ಸಿಕ್ತಿಲ್ಲ. ಗಾಳಿ (Air) , ನೀರಿಗೆ (Water) ಪರಿತಪಿಸುವ ಸನ್ನಿವೇಶ ಇದೆ ಎಂದು ವಿಷಾದಿಸಿದರು. ಈ ಹಿಂದೆ ರಾಜರು ಸಾಮ್ರಾಜ್ಯಗಳಿಗಾಗಿ ಹೋರಾಡಿದ್ರು. ಈಗ ಪೆಟ್ರೋಲ್ (Petrol) , ಡೀಸೆಲ್ (Diesel) , ನೀರಿಗಾಗಿ ಹೋರಾಟ ನಡೀತಿದೆ. ಇಂಥ ಸಂದರ್ಭದಲ್ಲಿ ಸದ್ಗುರು ಅವರ ಮಣ್ಣು ಉಳಿಸಿ ಅಭಿಯಾನದ ಅವಶ್ಯಕತೆ ಇದೆ. ಈ ಅಭಿಯಾನ ಸಮಯೋಚಿತವಾಗಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸಿ ಮಣ್ಣು ಉಳಿಸುವ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಜಗ್ಗಿ ವಾಸುದೇವ್ ಅವರ ಕಾಲು ಮುಟ್ಟಿ ಯಡಿಯೂರಪ್ಪ ನಮಸ್ಕರಿಸಿದರು. ಇದನ್ನು ಓದಿ :– ಅಸ್ಸಾಂ – ಮೇಘಾಲಯದಲ್ಲಿ ಪ್ರವಾಹದಿಂದಾಗಿ 1700 ಗ್ರಾಮಗಳು ಮುಳುಗಡೆ
ನಂತರ ಯಡಿಯೂರಪ್ಪ ಭಾಷಣ ಮಾಡಲು ತೆರಳುವ ವೇಳೆಯೂ ಸದ್ಗುರು (Sadhguru) ಕಾಲಿಗೆ ನಮಸ್ಕರಿಸಿದರು. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Bommai) , ಸಚಿವ ಬಿ.ಸಿ.ನಾಗೇಶ್ (BC.Nagesh) ಸೇರಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಭರತನಾಟ್ಯ, ಸಾಂಸ್ಕೃತಿಕ ನೃತ್ಯಗಳ ಮೂಲಕ ಸಿಎಂಗೆ ಸ್ವಾಗತ ಕೋರಲಾಯಿತು. ಇದನ್ನೂ ಓದಿ : – 52ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ಗಾಂಧಿ – ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್