ಬೆಂಗಳೂರಿನಲ್ಲಿ ಒಂದೇ ಕುಟುಂಬ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದು, ತಾಯಿ-ಮಗ ಮೃತಪಟ್ಟು, ಮಗಳು ಅಸ್ವಸ್ಥಗೊಂಡಿರುವ ದಾರುಣ ಘಟನೆ ನಡದಿದೆ.
ಬೆಂಗಳೂರಿನ ಆರ್.ಆರ್, ನಗರ ಪೊಲೀಸ್ ಠಾಣಾ ವ್ಯಾಪ್ತಿ ಬುಧವಾರ ಈ ಘಟನೆ ನಡೆದಿದ್ದು, ಒಂದೇ ಮನೆಯಲ್ಲಿ ಎರಡು ಶವ ಪತ್ತೆಯಾಗಿವೆ.
ಆರ್.ಆರ್. ನಗರದ ಬೆಮೆಲ್ ಲೇಔಟ್ ನಿವಾಸಿಗಳಾದ ಹರೀಶ್ (30) ಹಾಗೂ ತಾಯಿ ಆರ್ಯಂಬ ಮೃತಪಟ್ಟಿದ್ದು, ಹರೀಶ್ ಅಕ್ಕ ಶ್ರೀಲಕ್ಷ್ಮೀ (47) ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಶ್ರೀಲಕ್ಷ್ಮೀ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಮನೆಯಲ್ಲಿ ಬಾಡಿಗೆಗಿದ್ದ ಪ್ರವೀಣ್ ಪೊಲೀಸರಿಗೆ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಆರ್ ಆರ್ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.