ಭಾರತದ ಚುನಾವಣಾ ರಾಜಕಾರಣದಲ್ಲಿ ಫೇಸ್ ಬುಕ್ ಮತ್ತು ಇತರೇ ಸಾಮಾಜಿಕ ಮಾಧ್ಯಮಗಳು ‘ವ್ಯವಸ್ಥಿತ ಹಸ್ತಕ್ಷೇಪ’ ಮಾಡುವುದಕ್ಕೆ ಅಂತ್ಯ ಹಾಡುವಂತೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ. ಲೋಸಕಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸೋನಿಯಾ ಗಾಂಧಿ, ಅಲ್ ಜಜೀರಾ ಮತ್ತು ದಿ ರಿಪೋರ್ಟರ್ಸ್ ಕಲೆಕ್ಟೀವ್‌ನಲ್ಲಿ ಪ್ರಕಟಿಸಲಾದ ವರದಿಗಳನ್ನು ಉಲ್ಲೇಖಿಸಿದರು. ಚುನಾವಣಾ ಜಾಹೀರಾತುಗಳಿಗೆ ಇತರೆ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ಜತೆ ಫೇಸ್‌ಬುಕ್ ಕಡಿಮೆ ಮೊತ್ತದ ಒಪ್ಪಂದ ಮಾಡಿಕೊಂಡಿತ್ತು ಎಂದು ಆರೋಪಿಸಿದ್ದಾರೆ.
“ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದಲ್ಲಿನ ಚುನಾವಣಾ ರಾಜಕಾರಣದಲ್ಲಿ ಫೇಸ್‌ಬುಕ್ ಮತ್ತು ಇತರೆ ಸಾಮಾಜಿಕ ಮಾಧ್ಯಮ ದಿಗ್ಗಜ ಸಂಸ್ಥೆಗಳ ವ್ಯವಸ್ಥಿತ ಮಧ್ಯಪ್ರವೇಶಕ್ಕೆ ಸರ್ಕಾರ ಅಂತ್ಯ ಹಾಡಬೇಕು ಎಂದು ಮನವಿ ಮಾಡುತ್ತೇನೆ. ಇದು ಪಕ್ಷಪಾತ ರಾಜಕಾರಣವನ್ನು ಮೀರಿದ್ದು” ಎಂದು ಸೋನಿಯಾ ಗಾಂಧಿ ಆರೋಪಿಸಿದರು. “ಯಾರು ಅಧಿಕಾರದಲ್ಲಿ ಇದ್ದಾರೆ ಎನ್ನುವುದರ ಆಚೆ, ನಾವು ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡಬೇಕಿದೆ” ಎಂದು ತಿಳಿಸಿದರು.
“ತಪ್ಪು ಮಾಹಿತಿಗಳಿಂದ ಯುವ ಹಾಗೂ ವಯಸ್ಕ ಮನಸ್ಸುಗಳು ಭಾವನಾತ್ಮಕವಾಗಿ ದ್ವೇಷ ತುಂಬಿಕೊಳ್ಳುತ್ತಿವೆ. ಫೇಸ್‌ಬುಕ್‌ನಂತಹ ನಕಲಿ ಜಾಹೀರಾತು ಕಂಪೆನಿಗಳಿಗೆ ಇದರ ಬಗ್ಗೆ ತಿಳಿದಿದೆ ಮತ್ತು ಅದರಿಂದ ಲಾಭ ಪಡೆದುಕೊಳ್ಳುತ್ತಿವೆ. ದೊಡ್ಡ ನಿಗಮಗಳು, ಆಡಳಿತ ಸರ್ಕಾರ ಮತ್ತು ಫೇಸ್‌ಬುಕ್‌ನಂತಹ ಜಾಗತಿಕ ಸಾಮಾಜಿಕ ಮಾಧ್ಯಮಗಳ ನಡುವಿನ ಹೆಚ್ಚುತ್ತಿರುವ ನಂಟನ್ನು ಈ ವರದಿ ಬಹಿರಂಗಪಡಿಸಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ
0 71 1 minute read