ಮಸೀದಿಗಳ(Mosque) ಮೇಲಿನ ಅನಧಿಕೃತ ಮೈಕ್ ಸೆಟ್ ತೆರವುಗೊಳಿಸದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ (Dattatreya patil revor) ಮನೆ ಮುಂದೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ .
ಶ್ರೀರಾಮ ಸೇನೆ (Srirama sene) ಕಲಬುರಗಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು . ಸುಮಾರು ೨೦ ಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ದತ್ತಾತ್ರೇಯ ಪಾಟೀಲ್ ರೇವೂರ್ ಕಲಬುರಗಿಯ ದಕ್ಷಿಣ ಮತ ಕ್ಷೇತ್ರದ ಬಿಜೆಪಿ ಶಾಸಕ . ಹಲವಾರು ಬಾರಿ ಪ್ರತಿಭಟನೆ ನಡೆಸಿದ್ರು ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಶಾಸಕರ ಮನೆ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ . ಅನಧಿಕೃತ ಮೈಕ್ ಸೆಟ್ ಗಳನ್ನು ತೆರವು ಮಾಡಲು ಶ್ರೀರಾಮ ಸೇನೆ ಆಗ್ರಹಿಸಿತ್ತು . ಶ್ರೀರಾಮ ಸೇನೆ ಕಾರ್ಯಕರ್ತರು ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಗೆ ಮನವಿ ಸಲ್ಲಿಸಿದ್ರು . ಈಗಲೂ ಅನಧಿಕೃತ ಮೈಕ್ ಗಳನ್ನು ತೆರವುಗೊಳಿಸದಿದ್ರೆ ರಾಜ್ಯಾಧ್ಯಂತ ಉಗ್ರ ಹೋರಾಟದ ಎಚ್ಚರಿಕೆ ಕೊಟ್ಟಿದ್ದಾರೆ . ಇದನ್ನೂ ಓದಿ : – ರಾಯಚೂರಿನಲ್ಲಿ ಕಲುಷಿತ ನೀರಿಗೆ ನಾಲ್ಕನೆ ಬಲಿ