ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಮೇ 3ರನೇ ವಾರ ಪ್ರಕಟ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು ಈಗಾಗಲೇ ಮೌಲ್ಯಮಾಪನ ಪ್ರಕ್ರಿಯೆ ಮುಕ್ತಾಯವಾಗಿದೆ. ಫಲಿತಾಂಶದ ತಯಾರಿ ಮಾಡಲಾಗುತ್ತಿದೆ. ಮೂರನೇ ವಾರ ಫಲಿತಾಂಶ ಪ್ರಕಟ ಮಾಡುತ್ತೇವೆ. ಶೀಘ್ರವೇ ದಿನಾಂಕ ಪ್ರಕಟ ಮಾಡುತ್ತೇವೆ ಎಂದು ತಿಳಿಸಿದರು. ಮೇ 16 ರಿಂದಲೇ ಶಾಲೆಗಳು ಪ್ರಾರಂಭವಾಗಲಿವೆ. ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ತಿಳಿಸಿದರು. ಇದನ್ನೂ ಓದಿ : – ಆಸಾನಿ ಚಂಡಮಾರುತ ಸತತ ಮಳೆ – ಹಲವು ವಿಮಾನಗಳ ಹಾರಾಟ ರದ್ದು
ಎಂಎಲ್ಸಿಗಳು, ಸಭಾಪತಿಗಳು, ಎಂಎಲ್ಎಗಳು ಪತ್ರ ಬರೆದು ಹೆಚ್ಚು ಬಿಸಿಲು ಇರುತ್ತೆ ಶಾಲೆ ಪ್ರಾರಂಭ ಮುಂದಕ್ಕೆ ಹಾಕಿ ಅಂತ ಮನವಿ ಮಾಡಿದ್ದಾರೆ. ಆದರೆ ನಾವು ಹವಾಮಾನ ಇಲಾಖೆ ವರದಿ ಪಡೆದಿದ್ದೇವೆ. ಪ್ರತಿ ವರ್ಷದಂತೆ ಈ ವರ್ಷವೂ ಅದೇ ಪ್ರಮಾಣದಲ್ಲಿ ಬಿಸಿಲು ಇರಲಿದೆ. ಹೀಗಾಗಿ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ : – ಕೆಪಿಎಸ್ಸಿ ಒಂದೇ ಅಲ್ಲ, ಪಿಡಬ್ಲ್ಯುಡಿ, ಎಲ್ಲದರಲ್ಲೂ ಹಗರಣ ನಡೆದಿದೆ – ಡಿ.ಕೆ ಶಿವಕುಮಾರ್