ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕೆ.ಜಿ.ಎಫ್ 2’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಸಿನಿಮಾದ ಟ್ರೇಲರ್ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದು ಕೂತಿದ್ದರು. ಬೆಂಗಳೂರಿನಲ್ಲಿ ನಡೆಯುವ ಟ್ರೇಲರ್ ರಿಲೀಸ್ ಕಾರ್ಯಕ್ರಮವನ್ನು ಬಾಲಿವುಡ್ನ ಖ್ಯಾತ ನಿರೂಪಕ ಹಾಗೂ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಟ್ಟರು. ನಟ ಶಿವರಾಜ್ ಕುಮಾರ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಚಿತ್ರದ ಹೀರೋ ಯಶ್ ಸಂಜಯ್ ದತ್, ಪೃಥ್ವಿರಾಜ್ ಸುಕುಮಾರನ್, ಶ್ರೀನಿಧಿ ಶೆಟ್ಟಿ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಯಕಮ ಆರಂಭಕ್ಕೂ ಮೊದಲು ಅಪ್ಪುಗೆ ಮೌನಾಚರಣೆ ಮೂಲಕ ಚಿತ್ರತಂಡ ನಮನ ಸಲ್ಲಿಸಿತು. ನಂತರ ಓಂ ಚಿತ್ರದ ಐ ಲವ್ ಯೂ ಹಾಡನ್ನು ಹಾಡುವ ಮೂಲಕ ಟ್ರೇಲರ್ ಲಾಂಚ್ ಮಾಡಿದ್ದಾರೆ. ನಾನು ಕೆಜಿಎಫ್ ಲವ್ ಮಾಡ್ತಿನಿ ನೀವು ಲವ್ ಮಾಡಿ ಎಂದ ಶಿವಣ್ಣ ಹೇಳಿದ್ದಾರೆ.
ಚಿತ್ರ ಪ್ರೇಮಿಗಳ ಕಾತರ ಹೆಚ್ಚಿಸುವ ಕೆಜಿಎಫ್ 2 ಟ್ರೈಲರ್ 5 ಭಾಷೆಗಳಲ್ಲಿ ರಿಲೀಸ್ ಆಗಿದೆ. ರಿಲೀಸ್ ಆದ 12 ನಿಮಿಷಕ್ಕೆ 3 ಲಕ್ಷಕ್ಕೂ ಹೆಚ್ಚು ವ್ಯೂಸ್ ಆಗಿದೆ.
ಇದನ್ನು ಓದಿ:- ಪುನೀತ್ ಗೆ ಮರಣೋತ್ತರ ಗೌರವ ಡಾಕ್ಟರೇಟ್ – ಪಾರ್ವತಮ್ಮ, ಪುನೀತ್ ಹೆಸರಲ್ಲಿ 2 ಬಂಗಾರದ ಪದಕ ಘೋಷಿಸಿದ ಅಶ್ವಿನಿ