ರಾಮನಗರ : ಕೊರೊನಾ ವಿಚಾರವಾಗಿ ಇಷ್ಟೆಲ್ಲ ಅವಾಂತರಕ್ಕೆ ರಾಜಕೀಯ ವಿರೋಧಿಗಳೇ ಕಾರಣ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಿರುದ್ದ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಕಿಡಿಕಾರಿದರು.
ಚನ್ನಪಟ್ಟಣದದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಲಾಭಕ್ಕಾಗಿ ಹಲವಾರು ರೀತಿಯಲ್ಲಿ ವಿರೋಧ ಪಕ್ಷಗಳು ಮಾತನಾಡುತ್ತಾರೆ, ಮಾಜಿ ಸಿಎಂ ಕುಮಾರಸ್ವಾಮಿ ನಾನು ಹೇಳಿದ ರೀತಿ ಲಾಕ್ ಡೌನ್ ಮಾಡುತ್ತಿಲ್ಲ ಅಂತಾರೆ, ಯಾರದ್ದೋ ಹೇಳಿಕೆ ಮೇಲೆ ನಾವು ಸರ್ಕಾರ ನಡೆಸಲು ಆಗಲ್ಲ ಅಂತಾ ತಿರುಗೇಟು ನೀಡಿದರು.
ರಾಜ್ಯದ ತಜ್ಞರು, ನುರಿತ ವೈದ್ಯರ ಸಲಹೆ ಮೇರೆಗೆ ಲಾಕ್ ಡೌನ್ ಮಾಡಲಾಗಿದೆ ಅಂತಾ ಸಮರ್ಥಿಸಿಕೊಂಡರು. ರೋಗ ಹರಡದಂತೆ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತೆ, ಗೃಹ ಸಚಿವರು ಹೇಳಿದ್ದಾರೆ ಲಾಠಿ ಬೀಸಬೇಡಿ ಎಂದು ಆದರೆ ಪೊಲೀಸರಿಗೂ ಸಹನೆ ಕೆಡುತ್ತೆ, ಸಾರ್ವಜನಿಕರೇ ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ಮಾಡಿಕೊಳ್ಳಬೇಕು ಅಂತಾ ಕಿವಿ ಮಾತು ಹೇಳಿದರು.
ಬೆಡ್ ಬ್ಲಾಕ್ ದಂಧೆ ವಿಚಾರವಾಗಿ ಸಚಿವ ಸಿ.ಪಿ.ಯೋಗೇಶ್ವರ್ ಯಾವುದೇ ಪ್ರತಿಕ್ರಿಯೆ ನೀಡದೆ ನಾನು ಕಾಂಟ್ರವರ್ಸಿಗಳಿಗೆ ಉತ್ತರ ಕೊಡಲ್ಲ ಎಂದು ನುಣಿಚಿಕೊಂಡರು.