ಸ್ಮಶಾನದಲ್ಲಿ ಹೂತಿದ್ದ ಶವದ ಮೇಲೆ ನೀರು ಹಾಕಿ ಮಳೆಗಾಗಿ ಪ್ರಾರ್ಥನೆ ಮಾಡಿರುವ ಘಟನೆ ವಿಜಯಪುರ (Vijaypura) ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ.
ಸ್ಮಶಾನದಲ್ಲಿ ಶವ (Dead body) ಹೂತಿರೋ ಸ್ಥಳದಲ್ಲಿ ಎರಡು ಅಡಿ ಮಣ್ಣು ತೆಗೆದು ಪೈಪ್ ಮೂಲಕ ಸಮಾಧಿಗೆ ಗ್ರಾಮಸ್ಥರು ನೀರು (Water) ಹಾಕಿದ್ದಾರೆ. ಕಳೆದ ಶುಕ್ರವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಟ್ಯಾಂಕರ್ ಮೂಲಕ ಶವದ ಮೇಲೆ ಜನರು ನೀರು ಹಾಕಿದ್ದು, ಕೆಲ ಶವಗಳು ಬಾಯಿ ಬಿಟ್ಟಿರುತ್ತವೆ. ಅಂಥ ಶವಗಳ ಬಾಯಿಗೆ ನೀರು ಹಾಕೋ ಪದ್ದತಿ ಇದೆ. ಇದನ್ನೂ ಓದಿ : – ಚಿಕ್ಕಮಗಳೂರಿನಲ್ಲಿ ಮಳೆಯಿಂದಾಗಿ ಮನೆ ಕುಸಿತ
ಎಲ್ಲೆಲ್ಲಿ ಶವ ಬಾಯಿ ಬಿಟ್ಟಿವೆ ಎಂದು ವ್ಯಕ್ತಿ ಹೇಳಿದ್ದು, ಕೆಲ ಶವಗಳನ್ನು ಹೂತಿರೋ ಸ್ಥಳದಲ್ಲಿ ಎರಡು ಅಡಿ ಮಣ್ಣು ಅಗೆದು ಸ್ಥಳಿಯರು ನೀರು ಹಾಕಿದ್ದಾರೆ. ಆಧುನಿಕ ಕಾಲದಲ್ಲೂ ಇಂಥ ಆಚರಣೆ (Rituals) ಗಳನ್ನುಜನರು ನಂಬುತ್ತಿದ್ದಾರೆ. ಕಾಕತಾಳಿಯವೆಂಬಂತೆ ಶವದ ಬಾಯಿಗೆ ನೀರು ಹಾಕಿದ ಬಳಿಕ ಜಿಟಿಜಿಟಿ ಮಳೆ (Rain) ಯ ಆರಂಭವಾಗಿದೆ. ಇದನ್ನೂ ಓದಿ : – ಆಗುಂಬೆ ಘಾಟಿಯಲ್ಲಿ ಭೂಕುಸಿತ – ಕುದುರೆಮುಖ-ಕಾರ್ಕಳ ರಸ್ತೆ ಸಂಚಾರ ಅಸ್ತವ್ಯಸ್ತ