ಯುಗಾದಿ ಹೊಸತೊಡಕಿನ ಸಮಯದಲ್ಲಿಯೇ ರಾಜ್ಯದಲ್ಲಿ ಹಲಾಲ್ ಕಟ್ (Halal) ಜಟ್ಕಾ ಕಟ್ ವಿವಾದ ತೀವ್ರಗೊಂಡಿದೆ. ಈ ಮಧ್ಯೆ ಸ್ಟನ್ನಿಂಗ್ ಕಡ್ಡಾಯ ನಿಯಮ ಆದೇಶವನ್ನು ಸರ್ಕಾರದ ಪಶು ಸಂಗೋಪನಾ ಇಲಾಖೆ ಹೊರಡಿಸಿದೆ ಎಂಬ ಬಗ್ಗೆ ಸ್ವತಃ ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಇಲಾಖೆಯಿಂದ ಸ್ಟನ್ನಿಂಗ್ ಕಡ್ಡಾಯ ಬಗ್ಗೆ ಯಾವುದೇ ಆದೇಶವನ್ನು ಹೊರಡಿಸಿಲ್ಲ, ಹಲಾಲ್ ಕಟ್ ಮಾಡಬಾರದು ಎಂದು ಪತ್ರ ಬರೆದಿದ್ದಾರೆ ಅಷ್ಟೇ. ಪತ್ರದ ಬಗ್ಗೆ ಪರಿಶೀಲನೆ ಮಾಡಿ ಮುಂದಿನ ಅಭಿಪ್ರಾಯ, ಹೇಳಿಕೆ ನೀಡುತ್ತೇನೆ ಎಂದು ಹೇಳಿದ್ದಾರೆ. ಪ್ರಾಣಿಗಳಿಗೆ ವಿಪರೀತ ಹಿಂಸೆ ನೀಡದೆ, ಅವುಗಳು ನರಳಾಡದಂತೆ ಮಾಡಿ ಕೊಲ್ಲುವುದಕ್ಕೆ ಸ್ಟನ್ನಿಂಗ್ ಎನ್ನುತ್ತಾರೆ. ಸ್ಟನ್ನಿಂಗ್ ವೇಳೆ ಪ್ರಾಣಿಗಳ ತಲೆಗೆ ಜೋರಾಗಿ ಹೊಡೆಯಲಾಗುತ್ತದೆ. ಆಗ ಪ್ರಾಣಿಗಳ ತಲೆಗೆ ಪೆಟ್ಟು ಬಿದ್ದು ಅವುಗಳ ಮೆದುಳು ನಿಷ್ಕ್ರಿಯಗೊಳ್ಳುತ್ತದೆ. ಆ ವೇಳೆ ಪ್ರಾಣಿಗಳನ್ನು ವಧೆ ಮಾಡಲಾಗುತ್ತದೆ. ಯುಗಾದಿ ಹೊಸತೊಡಕಿನ ಮಧ್ಯೆ ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿಚಾರ ತಾರಕಕ್ಕೇರಿರೋದು ಮಾಂಸಪ್ರಿಯರಲ್ಲಿ ಅಸಮಧಾನ ಮೂಡಿಸಿತ್ತು.
ಇದನ್ನೂ ಓದಿ- ನಾನು ಸಚಿವ ಸ್ಥಾನದ ಲಾಬಿಗಾಗಿ ಅಮಿತ ಶಾ ಅವರನ್ನ ಭೇಟಿ ಮಾಡಿಲ್ಲ – ಅರವಿಂದ್ ಬೆಲ್ಲದ್