ಹೊಸಕೋಟೆ (Hoskote) ಸಬ್ ಇನ್ಸ್ ಪೆಕ್ಟರ್ ಪತ್ನಿಗೆ(Sub inspector wife) ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಸೂಲಿಬೆಲೆ (Sulibele) ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ರಮೇಶ್ ಗೂಗರಿ (Ramesh gugari) ವಿರುದ್ಧ ಪತ್ನಿಯೇ ಈ ಗಂಭೀರ ಆರೋಪ ಮಾಡಿದ್ದಾರೆ.
ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಮೇಶ್ ಗೂಗರಿ ವಿರುದ್ದ ಎಫ್.ಐ.ಆರ್ (FIR) ದಾಖಲಾಗಿದೆ. ಪತ್ನಿ ರಾಶಿ (Rashi) ಪಿಎಸ್ಐ ನನ್ನ ಮದುವೆಯಾಗಿ ಮತ್ತೆ ಬೇರೆಯವರನ್ನ ಮದುವೆಯಾಗಿದ್ದಾರೆ ಅಂತಾ ಎಫ್ ಐ ಆರ್ ನಲ್ಲಿ ಉಲ್ಲೇಖಿಸಿದ್ದಾರೆ.
ಸುಳ್ಳು ತಂದೆ ತಾಯಿಯನ್ನ ತೋರಿಸಿ ರಾಶಿ ಎಂಬುವವನ್ನ ರಿಜಿಸ್ಟ್ರಾರ್ ಮದುವೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮದುವೆಯಾದ ನಂತರ ಬೇರೆಯವರನ್ನ ಇಟ್ಟುಕೊಂಡು ಕಿರುಕುಳ ನೀಡಿದ್ದಾನೆ. ಆದರೆ ಈ ಆರೋಪವನ್ನ ಇನ್ಸ್ ಪೆಕ್ಟರ್ ತಳ್ಳಿಹಾಕಿದ್ದು ನಾನು ರಾಶಿ ಪ್ರೀತಿಸಿ ಮದುವೆಯಾಗಿದ್ದೇವು ಅಂತ ಹೇಳಿದ್ದಾನೆ. ಕಳೆದ ಒಂದು ವರ್ಷದಿಂದ ಗಂಡ ಹೆಂಡತಿ ಕೌಟುಂಬಿಕ ಕಲಹ ನಡೆಯುತ್ತಿದ್ದು ಹಲವು ಬಾರಿ ಪೊಲೀಸರು ಸಂಧಾನ ನಡೆಸಿದ್ದಾರೆ. ಸದ್ಯ ನ್ಯಾಯಕ್ಕಾಗಿ ಪಿಎಸ್ ಐ ಪತ್ನಿ ಎಸ್ಪಿ ಕಚೇರಿ ಮೊರೆ ಹೋಗಿದ್ದಾಳೆ. ಇದನ್ನೂ ಓದಿ : – ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಿ – ಕಾಂಗ್ರೆಸ್ ಗೆ ಶಾಸಕ ಬಂಡೆಪ್ಪ ಕಾಶೆಂಪೂರ್ ಮನವಿ