ಮಾರ್ಚ್ 23ರಿಂದ ಸುಯೆಜ್ ಕಾಲುವೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಭಾರತದ ಸುಮಾರು 200 ಹಡಗುಗಳು ಸಿಲುಕಿ ಹಾಕಿಕೊಂಡಿದ್ದು, ಈ ಸಂಖ್ಯೆ 350 ದಾಟುವ ಆತಂಕವಿದೆ.
ಸುಯೆಜ್ ಕಾಲುವೆಯ ಉತ್ತರ ಮತ್ತು ದಕ್ಷಿಣದ ಎರಡೂ ಗಡಿಗಳಲ್ಲಿ 200 ಹಡಗುಗಳು ಸಿಲುಕಿಕೊಂಡಿದ್ದು, ಕೆಲವು ದಿನಗಳಲ್ಲಿ ಈ ಸಂಖ್ಯೆ 350 ದಾಟಬಹುದು ಎಂದು ಹೇಳಲಾಗಿದೆ.
ಮೆಡಿಟರೇನಿಯನ್ ಸಾಗರದಲ್ಲಿ ಈಜಿಪ್ಟ್ ವ್ಯಾಪ್ತಿಯಲ್ಲಿ ನಿರ್ಮಿಸಿರುವ 193 ಕಿ.ಮೀ. ಉದ್ದದ ಕೃತಕ ಸಮುದ್ರ ದಾರಿ ನಿರ್ಮಿಸಲಾಗಿದ್ದು, ಏಷ್ಯಾ ಮತ್ತು ಯುರೋಪ್ ನಡುವೆ ಅತ್ಯಂತ ವೇಗವಾಗಿ ಮತ್ತು ಕಡಿಮೆ ಅವಧಿಯಲ್ಲಿ ಸಂಪರ್ಕ ಸಾಧಿಸಲಾಗಿತ್ತು.
2.2 ಲಕ್ಷ ಟನ್ ಕಂಟೇನರ್ ಶಿಪ್ ಈ ದಾರಿಯಲ್ಲಿ ಬಂದು ಸಿಲುಕಿರುವುದರಿಂದ ಇತರೆ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿದೆ.
ಭಾರತವು ಕೇಪ್ ಆಫ್ ಗುಡ್ ಹೋಪ್ ಸೇರಿದಂತೆ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳುವಂತೆ ತಮ್ಮ ಹಡುಗಗಳಿಗೆ ಮಾಹಿತಿ ರವಾನಿಸಿದೆ. ಅಲ್ಲದೇ ಸಮಸ್ಯೆ ಬಗೆಹರಿಸಲು ಚರ್ಚೆಗಳನ್ನು ನಡೆಸಲಾಗಿದೆ.