T20 ಮತ್ತು ಏಕದಿನ ಪಂದ್ಯಗಳಿಗೆ ಸಂಬಂಧಿಸಿದಂತೆ ಹೊಸ ರ್ಯಾಂಕಿಂಗ್ ಗಳನ್ನು ICC ಬಿಡುಗಡೆ ಮಾಡಿದೆ. ICC ಪುರುಷರ T20 ಬ್ಯಾಟಿಂಗ್ ರ್ಯಾಂ ಕಿಂಗ್ ನಲ್ಲಿ ಭಾರತದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ (Suryakumar yadav) ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ T20 ರ್ಯಾಂ ಕಿಂಗ್ ನಲ್ಲಿ 50ನೇ ಸ್ಥಾನಕ್ಕೆ ತಲುಪಿದ್ದಾರೆ.
ನ್ಯೂಜಿಲ್ಯಾಂಡ್ (Newzealand) ವಿರುದ್ಧದ ಎರಡನೇ T20 ಪಂದ್ಯ (T20 match) ದಲ್ಲಿ ಸೂರ್ಯಕುಮಾರ್ ಅಜೇಯ 111 ರನ್ ಸಿಡಿಸಿದ್ದರು. ಈ ಮೂಲಕ T20 ರ್ಯಾಂ ಕಿಂಗ್ನಲ್ಲಿ ತಮ್ಮ ಅಗ್ರ ಸ್ಥಾನವನ್ನು ಬಲಪಡಿಸಿಕೊಂಡಿದ್ದಾರೆ. ಈ ಸರಣಿಯಲ್ಲಿ ಸೂರ್ಯಕುಮಾರ್ 31 ರೇಟಿಂಗ್ ಪಾಯಿಂಟ್ ಗಳನ್ನು ಗಳಿಸಿದ್ದು, ಒಟ್ಟಾರೆ 890 ಪಾಯಿಂಟ್ ಗಳನ್ನು ಹೊಂದಿದ್ದಾರೆ. ಸೂರ್ಯಕುಮಾರ್ ಅವರಿಗಿಂತ 54 ಪಾಯಿಂಟ್ ಕಡಿಮೆ ಹೊಂದಿರುವ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ (Mohammed rizwan) ಎರಡನೇ ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ, ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ತಮ್ಮ ಟಿ20 ರ್ಯಾಂಕಿಂಗ್ ನಲ್ಲಿ ತಮ್ಮ ಸ್ಥಾನವನ್ನು ಉತ್ತಮ ಪಡಿಸಿಕೊಂಡಿದ್ದಾರೆ. ಕೊನೆ ಪಂದ್ಯದಲ್ಲಿ ಅಜೇಯ 30 ರನ್ ಗಳಿಸುವ ಮೂಲಕ ಬ್ಯಾಟರ್ ಗಳ ಜಂಟಿ 50ನೇ ಸ್ಥಾನವನ್ನು ತಲುಪಿದ್ದಾರೆ. ಇದನ್ನೂ ಓದಿ : – ಬ್ಯಾಟಿಂಗ್ ನಲ್ಲಿ ನಿರಂತರ ವೈಫಲ್ಯ ಹಿನ್ನೆಲೆ – ಕುಕ್ಕೆಗೆ ಮೊರೆ ಹೋದ K. L. ರಾಹುಲ್
ಬೌಲರ್ ಗಳ ಪಟ್ಟಿಯಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಎರಡು ಸ್ಥಾನ ಮೆಟೇರಿ 11ನೇ ಸ್ಥಾನಕ್ಕೆ ತಲುಪಿದ್ದಾರೆ. ಎಡಗೈ ಸೀಮರ್ ಅರ್ಷದೀಪ್ ಸಿಂಗ್ 21ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಸ್ಪಿನ್ನರ್ ಯುಜೇಂದ್ರ ಚಹಾಲ್ ಎಂಟು ಸ್ಥಾನ ಮೇಲೇರಿ 40ನೇ ಸ್ಥಾನಕ್ಕೆ ತಲುಪಿದ್ದಾರೆ. ಟೀಂ ಇಂಟಿಯಾದ ಭರವಸೆಯ ಆಟಗಾರರ ವಿರಾಟ್ ಕೊಹ್ಲಿ ಏಕದಿನ ರ್ಯಾಂ ಕಿಂಗ್ ನಲ್ಲಿ ಆರನೇ ಸ್ಥಾನಕ್ಕೆ ಏರಿದ್ದು ಮತ್ತೊಬ್ಬ ಬ್ಯಾಟರ್ ರೋಹಿತ್ ಶರ್ಮಾ ಎಂಟನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಬೌಲಗಳ ಪಟ್ಟಿಯಲ್ಲಿ ಜಸ್ಟ್ರೀತ್ ಬುಮ್ರಾ 11ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ : – ಮ್ಯಾಂಚೆ ಸ್ಟರ್ ಯುನೈಟೆಡ್ ತೊರೆದ ಕ್ರಿಸ್ಟಿಯಾನೊ ರೊನಾಲ್ಡೊ